ಪುಲ್ವಾಮಾ ದಾಳಿ – ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ : ಪಾಕಿಸ್ತಾನ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಇಸ್ಲಾಮಾಬಾದ್ : ಜಮ್ಮುಕಾಶ್ಮೀರದ ಪುಲ್ವಾಮ್ ನಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಸಿಆರ್ ಪಿಎಫ್ 42 ಯೋಧರು ಹುತಾತ್ಮರಾಗಿದ್ದಾರೆ. ಆದರೆ ಪಾಕಿಸ್ತಾನ ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿಕೊಂಡಿದೆ.

‘ಯಾವುದೇ ತನಿಖೆ ನಡೆಸದೆ ಭಾರತದ ಮಾಧ್ಯಮಗಳು ಈ ದಾಳಿಗೆ ಪಾಕ್ ಹೆಸರನ್ನು ಜೋಡಿಸುತ್ತಿರುವುದನ್ನು ನಾವು ಬಲವಾಗಿ ತಿರಿಸ್ಕರಿಸುತ್ತೇವೆ. ಇದೊಂದು ತೀವ್ರ ಆತಂಕದ ವಿಚಾರ’ ಎಂದು ಪಾಕ್ ಸರಕಾರದ ಹೇಳಿಕೆ ತಿಳಿಸಿದೆ.

ಪಾಕ್ ಮೂಲದ ಜೈಷ್ ಎ ಮೊಹಮ್ಮದ್ ಸಂಘಟನೆಯೇ ಈ ಕೃತ್ಯ ಎಸಗಿದ್ದು, ದಾಳಿಯಲ್ಲಿ 42 ಯೋಧರು ಹುತಾತ್ಮರಾಗಿದ್ದು, ಅನೇಕ ಯೋಧರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಇದೊಂದು ಗಂಭೀರವಾಗಿ ಕಾಳಜಿ ವಹಿಸಬೇಕಾದ ಸಂಗತಿ ಎಂದು ಹೇಳಿದೆ.

ವಿಶ್ವದ ಎಲ್ಲೇ ಆಗಲಿ ಹಿಂಸಾಚಾರವನ್ನು ಪಾಕ್ ಖಂಡಿಸುತ್ತದೆ. ಆದರೆ ತನಿಖೆ ನಡೆಸದೆ ಘಟನೆಗೂ ಪಾಕ್ ಗೂ ಸಂಬಂಧವಿದೆ ಎಂಬ ಸರ್ಕಾರದ ಹಾಗೂ ಭಾರತೀಯ ಮಾಧ್ಯಮಗಳ ಹೇಳಿಕೆಗಣ್ನು ತಾನು ತಿರಸ್ಕರಿಸುವುದಾಗಿ ಹೇಳಿದೆ.

ಇದೊಂದು ಹೀನಾತಿಹೀನ ಕೃತ್ಯವಾಗಿದ್ದು ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಕೃತ್ಯವಾಗಿದೆ. ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರ್‌ ನೇತೃತ್ವದ ಭಯೋತ್ಪಾದಕ ಸಂಘಟನೆ ಇದಾಗಿದೆ. ಈತನಿಗೆ ಪಾಕಿಸ್ತಾನ ಸರಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಎಲ್ಲೆಡೆ ಮುಕ್ತವಾಗಿ ಓಡಾಡಿಕೊಂಡಿದ್ದಾನೆ. ತನ್ನ ನೆಲದಿಂದ ಭಯೋತ್ಪಾದಕ ಕೃತ್ಯಗಳನ್ನು ಪ್ರಾಯೋಜಿಸುತ್ತಿರುವ ಈತ ಹಾಗೂ ಇತರ ಉಗ್ರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳದಿದ್ದಲ್ಲಿ ದಂಡಿಸುವ ಸಂಪೂರ್ಣ ಅಧಿಕಾರ ಭಾರತಕ್ಕಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.