ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ : ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ : ರಮಾನಾಥ ರೈ -Vishwanews24
ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ : ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ : ರಮಾನಾಥ ರೈ -Vishwanews24
ಮಂಗಳೂರು,: ಪೆಟ್ರೋಲ್, ಅಡುಗೆ ಅನಿಲ ಏರಿಸಿದ ಕೇಂದ್ರ ಸರಕಾರವು ಕರುಣೆ ಇಲ್ಲದ, ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ ಎಂದು ಮಾಜೀ ಮಂತ್ರಿ ಬಿ. ರಮಾನಾಥ ರೈ ಅವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಏರಿದ್ದರಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆ ಆಗಿದೆ. ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 147 ಡಾಲರ್ ತನಕ ಏರಿದ್ದ ಕಾಲದಲ್ಲೂ ಸರಕಾರ ಬೆಲೆಯನ್ನು ಹತೋಟಿಯಲ್ಲಿ ಇಟ್ಟಿತ್ತು. ಮೋದಿ ಕಾಲದಲ್ಲಿ ಬ್ಯಾರೆಲ್ ದರ 40 ಡಾಲರ್ ಆಚೀಚೆ ಇದ್ದರೂ ಪೆಟ್ರೋಲ್, ಡೀಸೆಲ್ ದರ ರೂಪಾಯಿ 100ನ್ನು ಮುಟ್ಟಿದೆ ಎಂದು ರೈ ಟೀಕಿಸಿದರು.
ಕಾಂಗ್ರೆಸ್ ಸರಕಾರವು ಇದ್ದಾಗ ಈ ಮೋದಿ ಮಹಾಶಯ ಬಿಜೆಪಿಯನ್ನು ಗೆಲ್ಲಿಸಿ ಎಲ್ಲ ಬೆಲೆ ಇಳಿಸುತ್ತೇವೆ ಎನ್ನುತ್ತಿದ್ದರು. ಆದರೆ ಮೋದಿ ಪ್ರಧಾನಿ ಆದ ಮೇಲೆ ಎಲ್ಲ ಬೆಲೆ ನೂರಾರು ಪಟ್ಟು ಹೆಚ್ಚಿದೆ. ಇದನ್ನು ಪ್ರಶ್ನಿಸಲು ಯಾರಿಗೂ ಧೈರ್ಯ ಇಲ್ಲ. ಏಕೆಂದರೆ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ. ಕಾಂಗ್ರೆಸ್ ಸರಕಾರ ಇದ್ದಾಗ ಬೆಲೆ ಏರಿಕೆಯನ್ನು ಎಲ್ಲರೂ ಖಂಡಿಸುತ್ತಿದ್ದರು. ಏಕೆಂದರೆ ಆಗ ನಿಜ ಪ್ರಜಾಪ್ರಭುತ್ವ ಇತ್ತು ಎಂದು ರಮಾನಾಥ ರೈ ಹೇಳಿದರು.
ನಮ್ಮ ಸರಕಾರ ಕೇಂದ್ರದಲ್ಲಿ ಇದ್ದಾಗ ಅಬಕಾರಿ ಸುಂಕ ಇಳಿಸಿದ್ದೆವು. ಇವರು ಏರಿಸುತ್ತಲೇ ಇದ್ದಾರೆ. ಮೋದಿ ಸರಕಾರವು ಬಡವರನ್ನು ನಿರ್ಲಕ್ಷ್ಯ ಮಾಡಿ, ಜನಸಾಮಾನ್ಯರನ್ನು ವಂಚಿಸಿ ಕಾರ್ಪೊರೇಟ್ ಜನರ ಹಿತ ಕಾಯುತ್ತದೆ. ಪೆಟ್ರೋಲ್ ಮೂಲ ಬೆಲೆ ರೂಪಾಯಿ 47 ಇದೆ ಇಷ್ಟು ಏರಿಕೆ ಏಕೆ? ಭಾರತದ ನೆರೆ ದೇಶಗಳಲ್ಲಿ ರೂ. 50ರ ಸುತ್ತಿನಲ್ಲಿ ಇದೆ. ಆದರೆ ಭಾರತದಲ್ಲಿ ಇಷ್ಟು ಏರಿಕೆ ಅಮಾನವೀಯ. ಇದು ಸುಳ್ಳು ಹೇಳುವ ಸರಕಾರ. ಪ್ರಧಾನಿ ಒಬ್ಬರು ಇಷ್ಟು ಸುಳ್ಳು ಹೇಳುವುದು ನಾಚಿಕೆಗೇಡು ಎಂದು ರೈ ಖಂಡಿಸಿದರು.
ಪುತ್ತೂರು: ಸಾಲ ವಸೂಲಿಗಾಗಿ ಮನೆ ಮುಟ್ಟುಗೋಲು ; ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಗೆ ಶರಣು -Vishwanews24
ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕುಮಾರ್, ಜೆ. ಆರ್. ಲೋಬೋ, ಇಬ್ರಾಹಿಂ ಕೋಡಿಜಾಲ್, ವಿಶ್ವಾಸ್ ದಾಸ್, ಸದಾಶಿವ ಉಲ್ಲಾಳ ಮೊದಲಾದವರು ಉಪಸ್ಥಿತರಿದ್ದರು
