ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ ಸಿ.ಐ.ಡಿ ತನಿಖೆಗೆ ನೀಡಿರುವುದು ಸ್ವಾಗತಾರ್ಹ : ಗುರ್ಮೆ ಸುರೇಶ್ ಶೆಟ್ಟಿ – vishwanews24
ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ ಸಿ.ಐ.ಡಿ ತನಿಖೆಗೆ ನೀಡಿರುವುದು ಸ್ವಾಗತಾರ್ಹ : ಗುರ್ಮೆ ಸುರೇಶ್ ಶೆಟ್ಟಿ
ಕೆಲವು ದಿನಗಳ ಹಿಂದೆ ಪ್ರೇಮ ವೈಪಲ್ಯದ ಹಿನ್ನಲೆಯನ್ನು ಮುಂದಿಟ್ಟುಕೊ0ಡು ಪೆರ್ಡೂರಿನ ಯುವಕ ಪ್ರದೀಪ ಪೂಜಾರಿ ಮೇಲೆ ನಡೆದ ಹಲ್ಲೆ ಮತ್ತು ಚಾರಿತ್ರ್ಯ ವಧೆಯಿಂದಾಗಿ ಮನನೊಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆತ್ಮಹತ್ಯೆ ಮಾಡಿಕೊಂಡ ಯುವಕನ ಸಾವಿನ ಕುರಿತ ತನಿಖೆಯನ್ನು ತಡವಾದರೂ ಸಿ.ಐ.ಡಿ ಗೆ ವಹಿಸಿರುವುದು ಸ್ವಾಗತಾರ್ಹ.
ಈ ಒಂದು ಪ್ರಕರಣದಲ್ಲಿ ಆತನ ಸಾವಿಗೆ ಕಾರಣರಾದ ದೋಷಿ ಪೋಲಿಸ್ ಅಧಿಕಾರಿಗಳು ಹಾಗೂ ಹಲ್ಲೆ ನಡೆಸಿದ ಗೂಂಡಾಗಳು ಮತ್ತು ವ್ಯವಸ್ಥಿತ ಸಂಚುದಾರರ ವಿರುದ್ದ ಪಕ್ಷಾತೀತವಾಗಿ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವಂತಾಗಬೇಕು. ಅದೆ ರೀತಿ ಇನ್ನೂ ಬಂಧನಕ್ಕೆ ಬಾಕಿ ಇರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಈ ರೀತಿಯ ಘಟನೆಗಳು ಜಿಲ್ಲೆಯಲ್ಲಿ ಪುನರಾವರ್ತನೆ ಆಗದ ರೀತಿಯಲ್ಲಿ ಸಂಬ0ಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಆಗ್ರಹಪಡಿಸಿದರು.
