ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯ : ಹಿಂದೂಗಳನ್ನ ಅವಮಾನಿಸೋದು ಫ್ಯಾಷನ್​ ಆಗಿಬಿಟ್ಟಿದೆ : ಪೊಗರು ವಿರುದ್ಧ ಶೋಭಾ ಕರಂದ್ಲಾಜೆ  – Vishwanews24

Featured, ರಾಜ್ಯ ನ್ಯೂಸ್

ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯ : ಹಿಂದೂಗಳನ್ನ ಅವಮಾನಿಸೋದು ಫ್ಯಾಷನ್​ ಆಗಿಬಿಟ್ಟಿದೆ : ಪೊಗರು ವಿರುದ್ಧ ಶೋಭಾ ಕರಂದ್ಲಾಜೆ  – Vishwanews24

ಬೆಂಗಳೂರು: ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯದ ಕುರಿತು ಟ್ವೀಟ್​ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಿಂದೂಗಳನ್ನ ಅವಮಾನಿಸುವುದು ಫ್ಯಾಷನ್​ ಆಗಿಬಿಟ್ಟಿದೆ. ನಮ್ಮ ಭಾವನೆಗಳ ಮೇಲೆ ಸವಾರಿ ಮಾಡಲಾಗುತ್ತಿದೆ. ಈ ರೀತಿ ಬೇರೆ ಧರ್ಮಗಳನ್ನ ಚಿತ್ರಿಸಲು ಧೈರ್ಯವಿದೆಯಾ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ವಿವಾದಾತ್ಮಕ ದೃಶ್ಯ ಸೆನ್ಸಾರ್​ ಮಾಡುವವರೆಗೂ ನಿಲ್ಲಿಸಬೇಕು. ಪೊಗರು ಚಿತ್ರದ ಸ್ಕ್ರೀನಿಂಗ್ ನಿಲ್ಲಿಸಬೇಕಾಗಿದೆ ಎಂದು ಟ್ವೀಟ್​ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮತ್ತು ಕೇರಳ ಅಂತರರಾಜ್ಯ ಪ್ರಯಾಣ ನಿಷೇಧವಿಲ್ಲ, ಕೊರೊನಾ ನೆಗಟಿವ್ ವರದಿ ಮಾತ್ರ ಕಡ್ಡಾಯ : ಸುಧಾಕರ್‌ ಸ್ಪಷ್ಟನೆ -Vishwanews24

 

ಈ ನಡುವೆ, ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿದ ದೃಶ್ಯವನ್ನು ತೆಗೆದುಹಾಕಲು ಈಗಾಗಲೇ ಎಡಿಟಿಂಗ್​ ಶುರುವಾಗಿದ್ದು, ನಾಳೆಯೊಳಗೆ ಅದನ್ನು ಸಿನಿಮಾದಿಂದ ತೆಗೆಯುತ್ತೇವೆ ಎಂದು ಪೊಗರು ನಿರ್ದೇಶಕ ನಂದಕಿಶೋರ್​  ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. , ಮತ್ತೊಮ್ಮೆ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಿದ್ದಾರೆ. ಆದಷ್ಟು ಶೀಘ್ರದಲ್ಲೇ ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತೇವೆ. ತಾಂತ್ರಿಕತೆ ದೃಷ್ಟಿಯಿಂದ ಸ್ವಲ್ಪ ಸಮಯ ಬೇಕು ಎಂದು ಕೇಳಿದ್ದಾರೆ.

ಉಡುಪಿ : ಆಯುಷ್ಮಾನ್ ಕಾರ್ಡ್ ಗೊಂದಲ ಪರಿಹರಿಸಿ: ದಿನಕರ ಬಾಬು -Vishwanews24

ಫೆ.19ರಂದು ಅದ್ದೂರಿಯಾಗಿ ತೆರೆ ಕಂಡ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡೋ ದೃಶ್ಯ ಇದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ‌ಮೂರ್ತಿ ಆರೋಪ ಮಾಡಿ, ಕೂಡಲೇ ಚಿತ್ರತಂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.

ತಮ್ಮ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಕ್ಕೆ ಹಿಂದೆಯೇ ಕ್ಷಮೆ ಕೇಳಿದ್ದ ನಿರ್ದೇಶಕ ನಂದಕಿಶೋರ್​, ನಮಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಬ್ರಾಹ್ಮಣರ ಬಗ್ಗೆ ತುಂಬ ಗೌರವ ಇದೆ ಎಂದೂ ಹೇಳಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ವಿವಾದಿತ ದೃಶ್ಯಗಳನ್ನು ಕತ್ತರಿಸುವುದಾಗಿ ತಿಳಿಸಿದ್ದಾರೆ.

ಪುತ್ತೂರು: ಬಸ್‌ನಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ; ಸುಳ್ಯದ ಅರೇಬಿಕ್ ಶಾಲಾ ಶಿಕ್ಷಕನ ಬಂಧನ -Vishwanews24