ಪೊಲಿಪು ವಿದ್ಯಾಸಂಸ್ಥೆಗಳ ಶತ,ವಜ್ರ,ಸ್ವರ್ಣ ಸಂಭ್ರಮ, ಧ್ವಜಾರೋಹಣ ನೆರೆವೇರಿಸಿದ ಅಣ್ಣಾಮಲೈ.
ಪೊಲಿಪು ವಿದ್ಯಾಸಂಸ್ಥೆಗಳ ಶತ,ವಜ್ರ,ಸ್ವರ್ಣ ಸಂಭ್ರಮ. ಧ್ವಜಾರೋಹಣ ನೆರೆವೇರಿಸಿದ ಅಣ್ಣಾಮಲೈ.
ಕಾಪು: ಶತ,ವಜ್ರ, ಸ್ವರ್ಣ ಸಂಭ್ರಮದಲ್ಲಿರುವ ಪೊಲಿಪು ಸರಕಾರಿ ವಿದ್ಯಾಸಂಸ್ಥೆಗಳ ಮೂರುದಿನಗಳ ನಿರಂತರ ಕಾರ್ಯಕ್ರಮದ ಅಂಗವಾಗಿ ಮೊದಲನೆ ದಿನವಾದ ಬುಧವಾರ ಇಂದು ಮಲ್ಪೆ ಬಸ್ ನಿಲ್ದಾಣದಿಂದ ಸರಕಾರಿ ಶಾಲೆ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಡ ಹಾಫ್ ಮ್ಯಾರಥಾನ್ ಗೆ ಮಾಜಿ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಚಾಲನೆ ನೀಡಿದರು.

ತದನಂತರ ಮೊದಲನೆಯ ದಿನದ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮ ನೆರೆವೇರಿಸಿ ಮ್ಯಾರಥಾನ್ ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತಡಿದ ಅವರು” ಕನ್ನಡ ಸರಕಾರಿ ಶಾಲೆಗಳ ಉಳಿವಿಗಾಗಿ ಹಮ್ಮಿಕೊಂಡ ಮ್ಯಾರಥಾನ್ ಶ್ಲಾಘನೀಯ ಹಾಗೂ ಪೊಲಿಪು ವಿದ್ಯಾಸಂಸ್ಥೆಳಲ್ಲಿ ಕಲಿತು ಉನ್ನತರಂಗದಲ್ಲಿರುವ ನಾಯಕರು ನಮಗೆಲ್ಲರಿಗೂ ರೋಲ್ ಮಾಡೆಲ್ ಎಂದರು.
ಇಂದು ಸಂಜೆ ಮೂರು ಗಂಟೆಗೆ ಕಾಪು ಪೇಟೆಯಿಂದ ಪೊಲಿಪು ವಿದ್ಯಾಸಂಸ್ಥೆಯವರೆಗೆ ಭವ್ಯ ಶೋಭಯಾತ್ರೆ,ನಡೆಯಲಿದೆ.
ಅನಿವಾಸಿ ಉದ್ಯಮಿ ಡಾ.ಬಿ.ಆರ್ ಶೆಟ್ಟಿ,ಕ.ಶಾಸಕ ಲಾಲಾಜಿ ಆರ್ ಮೆಂಡನ್, ಸರ್ವೊತ್ತಮ ಕುಂದರ್ ,ಡಾ ಶಿಶಿಲ್,ಕಿರಣ್ ಆಳ್ವಾ ಮೊದಲಾದವರು ಉಪಸ್ಥಿತಿತರಿದ್ದರು.
