ಪೋಕ್ಸೋ ಕೇಸ್​: ಬಿಎಸ್‌ವೈಗೆ ಬಿಗ್‌ ಶಾಕ್‌ ; ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಕಾರ – vishwanews24

Featured, ರಾಜ್ಯ ನ್ಯೂಸ್

ಪೋಕ್ಸೋ ಕೇಸ್​: ಬಿಎಸ್‌ವೈಗೆ ಬಿಗ್‌ ಶಾಕ್‌ ; ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಕಾರ

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಸಂಕಷ್ಟ ಎದುರಾಗಿದೆ. ಬಿಎಸ್‌ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಕೆಳ ನ್ಯಾಯಾಲಯ ಸಮನ್ಸ್ ಮಾಡಿರುವುದನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಕೆಳ ಹಂತದ ನ್ಯಾಯಾಲಯ ಆರೋಪ ನಿಗದಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಸಮನ್ಸ್‌ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಬಿಎಸ್‌ವೈ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಯಡಿಯೂರಪ್ಪ ಅರ್ಜಿಯನ್ನು ವಜಾಗೊಳಿಸಿ ಟ್ರಯಲ್‌ಗೆ ಅನುಮತಿ ನೀಡಿದೆ.

ಏನಿದು ಪ್ರಕರಣ : ತಮ್ಮ ಬೆಂಗಳೂರಿನ ಡಾಲರ್ಸ್‌ ಕಾಲನಿಯ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು 2024ರ ಮಾರ್ಚ್‌ ನಲ್ಲಿ ಆರೋಪ ಕೇಳಿ ಬಂದಿತ್ತು. ಬಾಲಕಿಯ ತಾಯಿಯ ಆರೋಪದ ಬಳಿಕ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೇಕೆದಾಟು ಯೋಜನೆ: ಸುಪ್ರೀಂ ನಿಂದ ತಮಿಳುನಾಡು ಅರ್ಜಿ ವಜಾ; ನ್ಯಾಯ ಪೀಠದಿಂದ ನಮಗೆ ಸಿಕ್ಕ ನ್ಯಾಯ : ಡಿ.ಕೆ.ಶಿ – vishwanews24

Leave a Reply