ಪ್ರಜಾಪ್ರಭುತ್ವ ಉಳಿಸಲು ರಾಹುಲ್​ ಗಾಂಧಿನ ಪ್ರಧಾನಿ ಮಾಡಿ -ಮಲ್ಲಿಕಾರ್ಜುನ ಖರ್ಗೆ

Featured, ರಾಜ್ಯ ನ್ಯೂಸ್

ಪ್ರಜಾಪ್ರಭುತ್ವ ಉಳಿಸಲು ರಾಹುಲ್​ ಗಾಂಧಿ ಅವರನ್ನ ಪ್ರಧಾನ ಮಂತ್ರಿ ಮಾಡಲೇಬೇಕು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ನಗರದಲ್ಲಿ ನಡೆಯುತ್ತಿರುವ ಜನದನಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲರೂ ಒಂದೇ ಎಂಬ ಸಮಾನತೆ ತರಬೇಕಾದರೆ, ರಾಹುಲ್​ ಗಾಂಧಿ ಪ್ರಧಾನಿಯಾಗಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಏನೇನೋ ಹೇಳ್ತಾರೆ.. ಅವರ ಮಾತಿಗೆ ಬೆಲೆ ಕೊಡಬೇಡಿ. ಅವರು 70 ವರ್ಷ ಏನು ಸಾಧನೆ ಮಾಡಿದ್ರು ಕೇಳ್ತಾರೆ. ನಾವು ದೇಶವನ್ನ ಸ್ವತಂತ್ರ ಮಾಡಿದ್ದೇವೆ ಎಂದು ಬಿಜೆಪಿಗೆ ಟಾಂಗ್​ ಕೊಟ್ಟರು. ಬಿಜೆಪಿಯವರು ಕಾಂಗ್ರೆಸ್ ಮುಗಿಸ್ತೀವಿ ಅಂತ ಹೇಳ್ತಾರೆ.. ಮೋದಿ, ಶಾ ಅಷ್ಟೇ ಅಲ್ಲ. ಅದು ಯಾರಿಂದಲೂ ಸಾಧ್ಯವಿಲ್ಲ ಎಂದರು. ಹೈದರಾ​​ಬಾದ್ ಕರ್ನಾಟಕದಲ್ಲಿ 5 ಸೀಟು ತರಲೇಬೇಕು. ಯಾಕಂದ್ರೆ 371 ಜೆ ಮೀಸಲಾತಿ ಜಾರಿಗೆ ತಂದವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ. ಈ ಎಲ್ಲವನ್ನು ಗಮನಿಸಿ ಕಾಂಗ್ರೆಸ್​​ನ್ನು ಮುಂದಿನ ಚುನಾವಣೆಯಲ್ಲಿ ಬಹುಮತದಿಂದ ತರಬೇಕು ಎಂದರು.