ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಸೋಲಿಸಲು ಇಡೀ ದೇಶವೇ ಒಂದಾಗಿದೆ : ಎಚ್.ಡಿ.ದೇವೇಗೌಡ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಕೋಲ್ಕತಾ: ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಣಿಸಲು ಸಂಪೂರ್ಣ ದೇಶವೇ ಒಂದಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

‘ಏಕೀಕೃತ ಭಾರತ ರ‍್ಯಾಲಿ’ಯಲ್ಲಿ ಪಾಲ್ಗೊಳ್ಳಲು ಕೋಲ್ಕತಾಗೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಓರ್ವ ಮಹಾನ್ ನಾಯಕಿ. ರಾಜಕೀಯಕ್ಕೆ ಇಂಥಹ ನಾಯಕರ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಶಂಸಿಸಿರುವ ದೇವೇಗೌಡರು, ದೇಶದಲ್ಲಿ ಜಾತ್ಯತೀತ ಸರಕಾರ ಆಡಳಿತಕ್ಕೆ ಬರಲು ಐತಿಹಾಸಿಕ ಪ್ರಯತ್ನವಿದು ಎಂದು ಶ್ಲಾಘಿಸಿದ್ದಾರೆ.