ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ‘ವಂದೇ ಮಾತರಂ’ ಪೂರ್ತಿಯಾಗಿ ಹಾಡಲು ಬರುವುದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ – vishwanews24

Featured, ರಾಜ್ಯ ನ್ಯೂಸ್

ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ‘ವಂದೇ ಮಾತರಂ’ ಪೂರ್ತಿಯಾಗಿ ಹಾಡಲು ಬರುವುದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ: ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು ಎಂದು ಪಟ್ಟು ಹಿಡಿದು ವೇದಿಕೆ ತೊರೆದ ಬಿಜೆಪಿ ನಾಯಕರ ನಡೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ತಿರುಗೇಟು ನೀಡಿದ್ದಾರೆ.

“ನಮಗೆ ಸಾಮಾನ್ಯವಾಗಿ ಎರಡು ಚರಣಗಳು ಮಾತ್ರ ಗೊತ್ತು. ಬಿಜೆಪಿ ಶಾಸಕರು ಇದನ್ನೇ ಅವಮಾನ ಎಂದು ಹೇಳಿ ವೇದಿಕೆ ಬಿಟ್ಟು ಹೋಗಿದ್ದಾರೆ. ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರಿಗೆ ನಾನೇ ವೇದಿಕೆ ಸಿದ್ಧಪಡಿಸಿಕೊಡುತ್ತೇನೆ, ಟೆಲಿಪ್ರಾಂಪ್ಟರ್ ಸಹಾಯವಿಲ್ಲದೆ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿ ತೋರಿಸಲಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೂ ವಂದೇ ಮಾತರಂ ಪೂರ್ತಿಯಾಗಿ ಹಾಡಲು ಬರುವುದಿಲ್ಲ. ಬಿಜೆಪಿ ನಾಯಕರು ನಿನ್ನೆಯಿಂದ ಪ್ರಾಕ್ಟೀಸ್ ಮಾಡುತ್ತಿರಬಹುದು, ಅಭ್ಯಾಸ ಮಾಡಿಕೊಂಡಾದರೂ ಬಂದು ಹಾಡಲಿ” ಎಂದು ವ್ಯಂಗ್ಯವಾಡಿದರು.

ತುಳು ಭಾಷೆಗೆ ಈ ಬಾರಿ ಮಾನ್ಯತೆ ಸಿಗುವುದು ಖಂಡಿತ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ – vishwanews24

ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯುತ್ತಿದೆ ಎಂದ ಸಚಿವರು, ವಿಪಕ್ಷಗಳ ಜವಾಬ್ದಾರಿಯನ್ನು ನೆನಪಿಸಿದರು.

ಕಳೆದ ಬಾರಿ ವಿಪಕ್ಷಗಳು ಅಧಿವೇಶನವನ್ನು ಗೊಂದಲಗೊಳಿಸಿ ಸಮಯ ಹಾಳು ಮಾಡಿದ್ದವು ಎಂದು ಆರೋಪಿಸಿದ ಅವರು, ಈ ಬಾರಿ ಕೆಪಿಎಸ್‌ಸಿ ವಿವಾದ ಸೇರಿದಂತೆ ಯಾವುದೇ ವಿಷಯದ ಕುರಿತು ಚರ್ಚೆಗೆ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಬಿಜೆಪಿ ನಾಯಕರು ಧೈರ್ಯವಿದ್ದರೆ ಕಲಾಪಕ್ಕೆ ಬಂದು ಮುಖಾಮುಖಿ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಬಹಿರಂಗ ಸವಾಲು ಎಸೆದರು.

ಹಾಸನ: ಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು – vishwanews24

 

Leave a Reply