ಪ್ರಧಾನಿ ಮೋದಿ ಇಡೀ ರಾಷ್ಟ್ರವನ್ನ ಹಿಂದೂ ರಾಷ್ಟ್ರ ಮಾಡಬೇಕು ಅನ್ನೋ ಕಲ್ಪನೆಯಲ್ಲಿದ್ದಾರೆ :ಹೆಚ್ ಡಿ ದೇವೇಗೌಡ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಸಂವಿಧಾನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದು ನಾವಲ್ಲ; ಅದು ಮೊದಲಿನಿಂದಲೂ ಇದೆ. ಈಗ ಬದಲಾವಣೆ ಬೇಕು ಎಂದು ‌ಏಕೆ ಎನಿಸುತ್ತಿದೆ? ಇದನ್ನು ನಾನು ಒಪ್ಪುವುದಿಲ್ಲ ಎಂದ ದೇವೇಗೌಡರು, ಮೋದಿ ಅವರಿಗೆ ಇಡೀ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪರಿಕಲ್ಪನೆ ಇದೆ. ಹಿಂದೆ ರಾಜರುಗಳು, ಎಲ್ಲಾ ವರ್ಗದ ಜನರು, ಹೀಗೆ ಎಲ್ಲರ ಅಭಿಪ್ರಾಯ ಪಡೆದೇ ಈ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಅಲ್ಲಿ ಮುಸ್ಲಿಂ, ಪಂಡಿತರು ಕ್ರಿಶ್ಚಿಯನ್, ಬೌದ್ಧ ಹೀಗೆ ಎಲ್ಲಾ ವರ್ಗದವರೂ ವಾಸವಿದ್ದಾರೆ. ದೇಶದ 130 ಕೋಟಿ ಜನರು 370 ವಿಧಿ ರದ್ದುಪಡಿಸಲು ಒಪ್ಪಿದರೆ ರದ್ದು ಮಾಡಲಿ. ನಮ್ಮ ಅಭ್ಯಂತರವಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾವು ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಪರಸ್ಪರ ಅನ್ಯೋನ್ಯವಾಗಿ ಸಹಬಾಳ್ವೆಯಿಂದ ಬಾಳುವ ಒಂದು‌ ವ್ಯವಸ್ಥೆಯನ್ನು ನಾವು ಬಯಸುತ್ತೇವೆ ಎಂದು ಹೇಳುವ ಮೂಲಕ ಘಟಬಂಧದ ನಿಲುವನ್ನು ಗೌಡರು ಸ್ಪಷ್ತಪಡಿಸಿದರು.