ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಆದೇಶ -ಮೀನುಗಾರಿಕಾ ಬೋಟ್’ಗಳು ಕೂಡಾ ಕಡಲಿಗೆ ಇಳಿದಿಲ್ಲ

Featured, ಉಡುಪಿ

ಮಂಗಳೂರು: ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಆದೇಶದ ನೀಡಿದ ಹಿನ್ನಲೆಯಲ್ಲಿ, ಕರಾವಳಿಯಲ್ಲಿ ಜನಸಂಪರ್ಕ ಕಡಿಮೆಯಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

ಮಂಗಳೂರಿನಲ್ಲಿ ಬೀಚ್ ಸೇರಿದಂತೆ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಮೀನುಗಾರಿಕಾ ಬೋಟ್’ಗಳು ಕೂಡಾ ಕಡಲಿಗೆ ಇಳಿದಿಲ್ಲ.

ಮಂಗಳೂರು – ಉಡುಪಿ ನಗರದಲ್ಲಿ ಯಾವುದೇ ಕೆ ಎಸ್ ಆರ್ ಟಿ ಸಿ ಮತ್ತು ಖಾಸಗಿ ಬಸ್ಸುಗಳು ಸಂಚರಿಸುತ್ತಿಲ್ಲ. ಉಭಯ ಜಿಲ್ಲೆಗಳ ಸಾರ್ವಜನಿಕ ಸಂಚಾರ ಸಂಪೂರ್ಣ ಸ್ಥಬ್ಧವಾಗಿದೆ. ಹೊಟೇಲ್, ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ ಆಗಿದೆ. ಆಟೋ, ಮ್ಯಾಕ್ಸಿ ಕ್ಯಾಬ್ ಬೀದಿಗಿಳಿದಿಲ್ಲ. ತುರ್ತು ಸೇವೆಗಳನ್ನು ಹೊರತು ಪಡಿಸಿ ನಗರ ಪೂರ್ತಿ ಬಂದ್‌ ಆಗಿದೆ. ಮೀನು ಮಾರುಕಟ್ಟೆ, ತರಕಾರಿ ಮಾರ್ಕೇಟ್ ಬಂದ್‌ ಆಗಿದ್ದು, ಜನತಾ ಕಫ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.