ಪ್ರಧಾನಿ ಮೋದಿ ಬಳಿಕ ಉಂಟಾಗುವ ರಾಜಕೀಯ ಕೋಲಾಹಲದಲ್ಲಿ ಬಿಜೆಪಿ ಉಳಿಯಲು ಸಾಧ್ಯವಿಲ್ಲ : ವೀರಪ್ಪ ಮೊಯ್ಲಿ – Vishwanews24
ಪ್ರಧಾನಿ ಮೋದಿ ಅವರ ನಂತರ ಉಂಟಾಗುವ ರಾಜಕೀಯ ಕೋಲಾಹಲದಲ್ಲಿ ಬಿಜೆಪಿ ಉಳಿಯಲು ಸಾಧ್ಯವಿಲ್ಲ
ಬಿಜೆಪಿ ಮತ್ತು ಇತರೆ ಪಕ್ಷಗಳು ನಡುವೆ ಬರುವ ಪ್ರಯಾಣಿಕರಂತೆ..
ಇಲ್ಲಿ ಕೊನೆಯವರೆಗೂ ಉಳಿಯುವುದು ಕಾಂಗ್ರೆಸ್ ಮಾತ್ರ..
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಒಳಗೆ ಸುಧಾರಣೆಯನ್ನು ಬಯಸಿದ್ದಾರೆ.
ಹೊಸದಿಲ್ಲಿ: ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಜಿ-23 ಗುಂಪಿನ ಸದಸ್ಯರ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ. ಈ ಮುಖಂಡರು ಸೋನಿಯಾ ಗಾಂಧಿ ಅವರನ್ನು ಗುರಿ ಮಾಡುತ್ತಿದ್ದಾರೆ ಮತ್ತು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಒಳಗೆ ಸುಧಾರಣೆಯನ್ನು ಬಯಸಿದ್ದಾರೆ. ಆದರೆ ಅವರ ಸುತ್ತಲಿನ ಜನರು ಅದನ್ನು ಹಾಳು ಮಾಡುತ್ತಿದ್ದಾರೆ. ಜಿ-23 ಮುಖಂಡರು ಹಿರಿಯ ನಾಯಕಿಯನ್ನು ಗುರಿ ಮಾಡುತ್ತಿದ್ದಾರೆ ಹಾಗೂ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ. ಬಿಜೆಪಿ ಚಿರಸ್ಥಾಯಿ ಪಕ್ಷವೇನಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಉಂಟಾಗುವ ರಾಜಕೀಯ ಕೋಲಾಹಲದಲ್ಲಿ ಅದು ಉಳಿಯಲು ಸಾಧ್ಯವಿಲ್ಲ” ಎಂದು ಮೊಯ್ಲಿ ಹೇಳಿದ್ದಾರೆ.
“ನಾವು ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಅಥವಾ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಬಿಜೆಪಿ ಮತ್ತು ಇತರೆ ಪಕ್ಷಗಳು ನಡುವೆ ಬರುವ ಪ್ರಯಾಣಿಕರಂತೆ. ಅವರು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಇಲ್ಲಿ ಕೊನೆಯವರೆಗೂ ಉಳಿಯುವುದು ಕಾಂಗ್ರೆಸ್ ಮಾತ್ರ. ನಾವು ದೀನರಿಗೆ ಬದ್ಧರಾಗಿರಬೇಕು ಮತ್ತು ಭರವಸೆ ಕಳೆದುಕೊಳ್ಳಬಾರದು” ಎಂದು ಅವರು ತಿಳಿಸಿದ್ದಾರೆ.
Just because we're not in power Congress leaders or workers should not panic. BJP and other parties are transit passengers, they'll come & go, it's the Congress that'll remain here. We should be committed to the downtrodden & need not lose hope: Congress leader M.Veerappa Moily pic.twitter.com/RmeZeDPrCE
— ANI (@ANI) March 18, 2022
ಜಿ-23 ನಾಯಕರು ಪಕ್ಷವನ್ನು ಇಬ್ಭಾಗ ಮಾಡಲು ಬಯಸಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಮೊಯ್ಲಿ, “ಎರಡು ಸಮಾನಾಂತರ ಕಾಂಗ್ರೆಸ್ ಇರಲು ಸಾಧ್ಯವಿಲ್ಲ. ನಾವು ಏನೇ ಮಾಡಿದರೂ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಮಾಡಬೇಕು. ಅವರು ಸುಧಾರಣೆಗೆ ಸಲಹೆ ನೀಡಿದ್ದರು ಮತ್ತು ಮನವಿ ಸಲ್ಲಿಸಿದ್ದರು. ಅವರು ನಾಯಕತ್ವದ ಜತೆ ಚರ್ಚೆ ನಡೆಸಬೇಕಿತ್ತು. ನಾವು ನಾಯಕತ್ವವನ್ನು ಖಂಡಿಸುವ ಅಥವಾ ಟಾರ್ಗೆಟ್ ಮಾಡುವುದನ್ನು ಆರಂಭಿಸಬಾರದು. ಅವರು ಜಿ-23 ಅನ್ನು ಸಂಸ್ಥೀಕರಿಸಬಾರದು. ನಾನು ಅದರ ಜತೆ ನಂಟು ಹೊಂದಿಲ್ಲ” ಎಂದಿದ್ದಾರೆ.
ಮಾ.21ಕ್ಕೆ ಅಪ್ಪಳಿಸಲಿದೆ ಅಸಾನಿ ಚಂಡಮಾರುತ ; ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆʼಯಿಂದ ಎಚ್ಚರಿಕೆ
