ಪ್ರಧಾನಿ ಮೋದಿ ಭಾರತದ ಪ್ರಜೆ ಹೌದೆ ಅಲ್ಲವೆ ಎಂದು ತಿಳಿಯಲು ಪೌರತ್ವ ದಾಖಲೆ ಕೋರಿ ಆರ್‌ಟಿಐ ಅರ್ಜಿ -Vishwanews24
ತ್ರಿಶೂರ್ : ಮೋದಿ ಭಾರತದ ಪ್ರಜೆ ಹೌದೆ ಅಲ್ಲವೆ ಎಂದು ತಿಳಿಯುವ ಸಲುವಾಗಿ ಸೂಕ್ತ ಪೌರತ್ವ ದಾಖಲೆಗಳನ್ನು ನೀಡುವಂತೆ ಕೋರಿ ಮಾಹಿತಿ ಹಕ್ಕು ಅರ್ಜಿಯನ್ನು ಕೇರಳ ಮಾಹಿತಿ ಇಲಾಖೆಗೆ ಸಲ್ಲಿಸಲಾಗಿದೆ.
ತ್ರಿಶೂರ್ ಜಿಲ್ಲೆಯ ಚಳಕ್ಕುಡಿ ಪಟ್ಟಣದ ಜೋಶ್ ಕಲ್ಲುವೀಟ್ಟಿಳ್ ಈ ನಿಟ್ಟಿನಲ್ಲಿ ಜನವರಿ 13 ರಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸಿ ಎಂದು ಅರ್ಜಿಯಲ್ಲಿ ಕೋರಲಾಗಿದೆ.

