ಪ್ರಧಾನಿ ಮೋದಿ, ಹಾಗೂ ಅಮಿತ್‌ ಶಾ ಅವರ ವರ್ತನೆಯಿಂದಲೇ ರಾಜ್ಯದಲ್ಲಿ ಅಶಾಂತಿ ನೆಲೆಸಿದೆ : ಎಚ್.ಡಿ. ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರ ವರ್ತನೆಯಿಂದಲೇ ರಾಜ್ಯದಲ್ಲಿ ಅಶಾಂತಿ ನೆಲೆಸಿದೆ. ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಕಿತ್ತೆಸೆಯಿರಿ, ಎಲ್ಲವೂ ಸರಿ ಹೋಗುತ್ತದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಬದಲಿಗೆ ಹಿಂದೂಗಳ ನಿಜವಾದ ರಕ್ಷಕರೆಂಬ ಸುಳ್ಳು ಹೇಳುತ್ತಿದ್ದೀರಿ. ನಾವೂ ಹಿಂದೂಗಳೇ, ಹಿಂದೂಗಳ ವಿಚಾರದಲ್ಲಿ ನಿಮಗಿಂತ ನಮ್ಮ ಬದ್ಧತೆಯೇ ಹೆಚ್ಚಿದೆ’ ಎಂದು ಅವರು ಹೇಳಿದರು.

‘ಕೆಲವೊಂದು ವಿಷಯಗಳನ್ನು ಸರ್ಕಾರ ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕು. ಸಮಾಜದಲ್ಲಿ ಒಡಕು ಸೃಷ್ಟಿಸುವ ರೀತಿಯಲ್ಲಿ ವರ್ತಿಸಬಾರದು. ಮಂಗಳೂರಿನಲ್ಲಿ  ಡಿಸೆಂಬರ್‌ 19ರ ಘಟನೆಯ ಎಷ್ಟು ಸತ್ಯಾಂಶ ಹೊರಗೆ ಇಟ್ಟಿದ್ದೀರಿ?  ಬೆಂಗಳೂರಿನಲ್ಲಿ ಸಿಎಎ ಪರ ಹೋರಾಟ ನಡೆದಾಗ ಯಾವುದೇ ಗಲಭೆ ನಡೆದಿರಲಿಲ್ಲ, ಆದರೆ ಕೆಲವರನ್ನು ಬಂಧಿಸಿದ ಬಳಿಕ ಏಳು ಬಾರಿ ಕಲ್ಲು ಬಿತ್ತು ಎಂದು ಹೇಳುತ್ತಿದ್ದೀರಿ. ವರುಣ್‌ ಮೇಲೆ ಹಲ್ಲೆ ಯಾರೇ ನಡೆಸಿದ್ದರೂ ಅದನ್ನು ನಾನು ಖಂಡಿಸುತ್ತೇನೆ’ ಎಂದರು.

 

‘ಪಾಕ್‌ ಇಲ್ಲದಿದ್ದರೆ ಒಂದೂ ವೋಟೂ ಇಲ್ಲ’
‘ಪಾಕಿಸ್ತಾನ ಎಂಬ ದೇಶ ಈ ಭೂಪಟದಲ್ಲಿ ಇಲ್ಲದಿದ್ದರೆ ನೀವಿಲ್ಲಿ ಒಂದು ವೋಟೂ ಪಡೆಯಲು ಸಾಧ್ಯವಿರುತ್ತಿರಲಿಲ್ಲ. ಅದಕ್ಕಾಗಿಯೇ ಪಾಕ್‌ ನಾಮಸ್ಮರಣೆ ನಿಮ್ಮ ಕಾಯಕವಾಗಿಬಿಟ್ಟಿದೆ. ನನ್ನನ್ನು ದೇಶದ್ರೋಹಿ ಎನ್ನುತ್ತಿರುವ ನಿಮ್ಮ ಮೂಲ ಪಾಕ್‌ ಇರಬಹುದೇನೋ ನನಗೆ ಗೊತ್ತಿಲ್ಲ. ಪಾಕಿಸ್ತಾನದ ನೆಲ ಸ್ಪರ್ಶಿಸಿ, ಬಿರಿಯನಿ ತಿಂದು ಬಂದ ಪ್ರಧಾನಿಯ ಮಂತ್ರಿಮಂಡಲದಲ್ಲಿರುವ ನೀವು ದೇಶಭ್ರಷ್ಟರು, ನಾನು ಈ ಮಣ್ಣಿನವ’ ಎಂದು ಟ್ವೀಟ್‌ ಮಾಡಿದ್ದಾರೆ.

ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292