ಪ್ರಧಾನಿ ಮೋದಿಗೆ ಮತ್ತೆ ಮೈಸೂರಿಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ – Vishwanews24
ಪ್ರಧಾನಿ ಮೋದಿಗೆ ಮತ್ತೆ ಮೈಸೂರಿಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ – Vishwanews24
ಮೈಸೂರು: ಬಿಜೆಪಿ, ಮೋದಿ ಎಂದರೆ ಕಿಡಿ ಕಾರುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದೆ, ಸ್ಯಾಂಡಲ್ವುಡ್ ಸ್ಟಾರ್ ನಟಿ ರಮ್ಯಾ ಇದೀಗ ತಮ್ಮ ಟ್ವೀಟ್ ಮೂಲಕ ಎಲ್ಲರಿಗೂ ಅಚ್ಚರಿ ಕೊಟ್ಟಿದ್ದಾರೆ. ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿ ಹಿಂತಿರುಗಿರುವ ಪ್ರಧಾನಿ ಮೋದಿಗೆ ಮತ್ತೆ ಬರುವಂತೆ ಆಮಂತ್ರಣ ನೀಡಿರುವ ರಮ್ಯಾ, ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನು ಗೊಂದಲಕ್ಕೀಡು ಮಾಡಿದ್ದಾರೆ.
ಟ್ವೀಟ್ನಲ್ಲೇನಿದೆ?
ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದ ಹಿನ್ನೆಲೆಯಲ್ಲಿ ರಮ್ಯಾ ಈ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಟ್ವೀಟ್ನಲ್ಲಿ ರಮ್ಯಾ ಏನು ಹೇಳಿದ್ದಾರೆ ಎಂದು ನೋಡುವುದಾದರೆ, ‘ನಮ್ಮ ಮೈಸೂರಿಗೆ’ ಸ್ವಾಗತ ಪ್ರಧಾನಿ ನರೇಂದ್ರ ಮೋದಿಯವರೇ.. ಎಂದು ಸ್ವಾಗತಿಸಿದ್ದಾರೆ. ಮುಂದುವರೆಸಿ ಬರೆದಿರುವ ರಮ್ಯಾ, ಸಮಯವಿದ್ದರೆ ಮೈಸೂರಿನಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ಎಂದು ನಮೂದಿಸಿರುವ ರಮ್ಯಾ ಇಲ್ಲಿನ ರಸ್ತೆಗಳನ್ನು ಉದ್ಘಾಟಿಸಿ, ಇದರ ಅಗತ್ಯ ನಮಗೆ ಬಹಳಷ್ಟಿದೆ. ಇದನ್ನು ಕಲ್ಪಿಸಿದ ಸಚಿವ ನಿತಿನ್ ಗಡ್ಕರಿಗೆ ಧನ್ಯವಾದ ಎಂದೂ ಹೇಳಿದ್ದಾರೆ.
ಇದೇ ವೇಳೆ ಮೈಸೂರಿನ ಜನಪ್ರಿಯ ಮೈಲಾರಿ ಬೆಣ್ಣೆ ದೋಸೆ ರುಚಿಯನ್ನೂ ಸವಿಯಿರಿ, ಇದು ಬಹಳ ಮೃದುವಾದ ದೋಸೆ ಕೂಡಾ ಹೌದು ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ರಮ್ಯಾ ನೀವು ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯನ್ನು ವೀಕ್ಷಿಸಬಹುದು, ಸಾಧ್ಯವಾಗದಿದ್ದರೆ ಮೈಸೂರಿನ ಯುವ ಪ್ರತಿಭಾವಂತ ಮೈಸೂರಿಯನ್ನರು ಮಾಡಿದ ಆರ್ಕೆಸ್ಟ್ರಾದ ಟ್ರೈಲರ್ ವೀಕ್ಷಿಸಬಹುದು ಎಂದು, ಈ ಸಿನಿಮಾವನ್ನೂ ಪ್ರೊಮೋಟ್ ಮಾಡಿದ್ದಾರೆ.
Welcome to Namma Mysuru @narendramodi avare
A list of things to do in Mysuru if time permits-
1.Innaugurate roads. Ofcourse. We badly need them.
Also, thank you @nitin_gadkari ji2.Please try our famous Mylari Benne Dose. Softest dose you will ever have 1/2
— Divya Spandana/Ramya (@divyaspandana) June 21, 2022
ತಮ್ಮ ಪಟ್ಟಿಯನ್ನು ಪೂರ್ಣಗೊಳಿಸಿದ ರಮ್ಯಾ, ಈ ಪಟ್ಟಿಗೆ ನೀವೇನಾದರೂ ಸೇರಿಸಲು ಇಚ್ಛಿಸಿದರೆ ಕಮೆಂಟ್ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಗೆ ಮತ್ತೆ ಮೈಸೂರಿಗೆ ಭೇಟಿ ನೀಡುವಂತೆಯೂ ಆಹ್ವಾನ ನೀಡಿದ್ದಾರೆ ಸ್ಯಾಂಡಲ್ವುಡ್ ಕ್ವೀನ್.
