ಪ್ರಧಾನಿಯವರು ರೈತರಲ್ಲಿ ಕ್ಷಮೆ ಕೇಳುವುದರಿಂದ ವಿದೇಶದಲ್ಲಿ ಅವರ ಪ್ರತಿಷ್ಠೆಗೆ ದಕ್ಕೆ ಉಂಟಾಗುತ್ತದೆ ,  ಇದನ್ನು ನಾವು ಬಯಸುವುದಿಲ್ಲ  : ರಾಕೇಶ್ ಟಿಕಾಯತ್ – Vishwanews24

Featured, ರಾಷ್ಟ್ರ ನ್ಯೂಸ್

ಪ್ರಧಾನಿಯವರು ರೈತರಲ್ಲಿ ಕ್ಷಮೆ ಕೇಳುವುದರಿಂದ ವಿದೇಶದಲ್ಲಿ ಅವರ ಪ್ರತಿಷ್ಠೆಗೆ ದಕ್ಕೆ ಉಂಟಾಗುತ್ತದೆ ,  ಇದನ್ನು ನಾವು ಬಯಸುವುದಿಲ್ಲ  : ರಾಕೇಶ್ ಟಿಕಾಯತ್ – Vishwanews24

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರೈತರಲ್ಲಿ ಕ್ಷಮೆ ಕೇಳುವುದರಿಂದ ವಿದೇಶದಲ್ಲಿ ಅವರ ಪ್ರತಿಷ್ಠೆಗೆ ದಕ್ಕೆ ಉಂಟಾಗುತ್ತದೆ. ಇದನ್ನು ನಾವು ಬಯಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

ಈ ಕುರಿತು ಟ್ವೀಟ್ ಮಾಡಿದ ಅವರು, ಪ್ರಧಾನಿ ಮೋದಿ ಕ್ಷಮೆ ಕೇಳುವುದು ನಮಗೆ ಇಷ್ಟವಿಲ್ಲ. ಜೊತೆಗೆ ವಿದೇಶದಲ್ಲಿ ಅವರ ಖ್ಯಾತಿಯನ್ನು ಕೆಡಿಸಲು ನಾವು ಬಯಸುವುದಿಲ್ಲ. ಪುನಃ ರೈತರ ಒಪ್ಪಿಗೆ ಇಲ್ಲದೆ ಕೃಷಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಕೈಗೊಂಡರೆ ಆ ಕಾನೂನನ್ನು ತರಲಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ಸುಮಾರು ಒಂದು ವರ್ಷದಿಂದ ಹಲವಾರು ರೈತ ಸಂಘಗಳು ಕೃಷಿ ಕಾಯ್ದೆ ರದ್ದುಗೊಳಿಸಲು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸಿತ್ತು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೂರು ರದ್ದಾದ ಕೃಷಿ ಕಾನೂನುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ಪ್ರಧಾನಿ ಅವರನ್ನು ಅವಮಾನಿಸುತ್ತದೆ. ಒಂದು ವೇಳೆ ಕೃಷಿ ಕಾನೂನುಗಳನ್ನು ಕೇಂದ್ರವು ಪುನಃ ಪರಿಚಯಿಸಿದರೆ ಆಂದೋಲನವನ್ನು ಪುನಾರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ಈ ವಿಷಯದ ಕುರಿತು ಕೃಷಿ ಸಚಿವರು ಮಾತನಾಡಿ, ನಾಗ್ಪುರ ಕಾರ್ಯಕ್ರಮವೊಂದರಲ್ಲಿ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ. ಕೃಷಿ ಕಾನೂನುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ ಎಂದು ನಂತರ ಸ್ಪಷ್ಟಪಡಿಸಿದರು.

ಕೋವಿಡ್‌ ನಿಯಮಾವಳಿಗಳನ್ನು ಪಾಲಿಸದ ಗರುಡಾ ಮಾಲ್‌ಗೆ ₹20,000 ದಂಡ ವಿಧಿಸಿದ ಬಿಬಿಎಂಪಿ – Vishwanews24

Leave a Reply