ಪ್ರಯಾಣದ ವೇಳೆ ಹೆರಿಗೆ ನೋವು  ;  ಬಸ್ಸನ್ನು ನೇರವಾಗಿ ಆಸ್ಪತ್ರೆ ಬಳಿ ತಂದು ನಿಲ್ಲಿಸಿದ ಚಾಲಕ – ಬಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ – vishwanews24

Featured, ರಾಷ್ಟ್ರ ನ್ಯೂಸ್

ಪ್ರಯಾಣದ ವೇಳೆ ಹೆರಿಗೆ ನೋವು  ;  ಬಸ್ಸನ್ನು ನೇರವಾಗಿ ಆಸ್ಪತ್ರೆ ಬಳಿ ತಂದು ನಿಲ್ಲಿಸಿದ ಚಾಲಕ – ಬಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಬಸ್​ನಲ್ಲಿ ಚಲಿಸುತ್ತಿದ್ದ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೊನೆಗೆ ಡ್ರೈವರ್​ ಬಸ್ಸನ್ನು ನೇರವಾಗಿ ಆಸ್ಪತ್ರೆ ಬಳಿ ತಂದು ನಿಲ್ಲಿಸಿದ ಘಟನೆ ದೃಶ್ಯ ಸಮೇತ ವೈರಲ್​ ಆಗಿದೆ. ಕೇರಳದ ತ್ರಿಶೂರ್​​ನಿಂದ ಕೋಝಿಕ್ಕೋಡ್​ಗೆ ತೆರಳುತ್ತಿದ್ದ ಬಸ್​ನಲ್ಲಿ ಈ ಘಟನೆ ನಡೆದಿದೆ. ಡ್ರೈವರ್​ ಮಹಾತ್ಕಾರ್ಯದಿಂದ ಮಹಿಳೆ ಬಸ್​ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಬಸ್​ ಪೆರಮಂಗಲಂ ಪ್ರದೇಶವನ್ನು ದಾಟಿದಂತೆ 37 ವರ್ಷದ ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ತಿಳಿದಂತೆ ಬಸ್​ ಚಾಲಕ ಬಸ್​ ಅನ್ನು ತ್ರಿಶೂರು ಕಡೆಗೆ ತಿರುಗಿಸಿದ್ದಾರೆ. ಅಲ್ಲಿನ ಅಮಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅದಕ್ಕೂ ಮುನ್ನ ಆಸ್ಪತ್ರೆಯ ಸಿಬ್ಬಂದಿಗೆ ವಿಚಾರ ತಿಳಿಸಲಾಗಿದೆ. ಬಸ್​ ಆಸ್ಪತ್ರೆಯನ್ನು ತಲುಪುವ ಮೊದಲೇ ಸಿಬ್ಬಂದಿಗಳು ಮತ್ತು ವೈದ್ಯರು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.

ಪ್ರಜ್ವಲ್‍ರನ್ನು ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆಯಲು ಈಗಾಗಲೇ ವಾರೆಂಟ್ ಜಾರಿಯಾಗಿದೆ : ಪರಮೇಶ್ವರ್ – vishwanews24

ಬಸ್​ ಆಸ್ಪತ್ರೆ ಬಳಿ ಬಂದಂತೆ ಮಹಿಳೆ ವೈದ್ಯರ ಸಹಾಯದಲ್ಲಿ ಬಸ್​ನಲ್ಲೇ ಹೆರಿಗೆಯಾಗಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಇನ್ನು ಮಹಿಳೆಯ ಹೆರಿಗೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ತಾಯಿ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಬಸ್​ ಚಾಲಕ ಬಸ್​ ಅನ್ನು ಆಸ್ಪತ್ರೆಗೆ ಬಳಿ ಚಲಾಯಿಸಿಕೊಂಡು ಬರುವ, ಮಹಿಳೆ ಹೆಣ್ಣು ಮಗುವಿನ ಜನ್ಮ ನೀಡಿದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇನ್ನು ದೃಶ್ಯವನ್ನು ಕಂಡು ಚಾಲಕ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಗೆ ನೆಟ್ಟಿಗರು ಧನ್ಯವಾದ ಹೇಳಿದ್ದಾರೆ.

ಬ್ರಹ್ಮಾವರ: ಲಂಚ ಸ್ವೀಕರಿಸುತ್ತಿದ್ದ ಉಪ್ಪೂರು ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ – vishwanews24

Leave a Reply