ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು – vishwanews24
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು
ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹಂತಕರ ಪೈಕಿ ಮತ್ತೋರ್ವ ಪ್ರಮುಖ ಆರೋಪಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಝಾಕೀರ್ ಸವಣೂರು (35) ಜಾಮೀನು ಪಡೆದ ಆರೋಪಿ. ಈತ ಪ್ರಕರಣದ 18ನೇ ಆರೋಪಿಯಾಗಿದ್ದ.
ಪುತ್ತೂರು ಅತ್ಯಾಚಾರ ಪ್ರಕರಣ: ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಕ್ಕೆ ಹೈಕೋರ್ಟ್ ಸೂಚನೆ – vishwanews24
ಪ್ರವೀಣ್ ನೆಟ್ಟಾರ್ ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾದವರಲ್ಲಿ ಈತನೂ ಒಬ್ಬನಾಗಿದ್ದ. ಈ ಪ್ರಕರಣದಲ್ಲಿ ಆರಂಭದಲ್ಲೇ ಬಂಧಿಸಲ್ಪಟ್ಟ ಇಬ್ಬರು ಪ್ರಮುಖ ಶಂಕಿತರಲ್ಲಿ ಝಾಕೀರ್ ಸವಣೂರು ಕೂಡ ಒಬ್ಬನು. ಈತನನ್ನು 2022 ಜು.28 ರಂದು ಬೆಳ್ಳಾರೆಯ ಶಫೀಕ್ನೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಹಿಂದೆ ಪ್ರಕರಣದ 26ನೇ ಆರೋಪಿಯಾಗಿರುವ ಸೋಮವಾರ ಪೇಟೆಯ ಎಚ್.ವೈ. ರಿಯಾಜ್ ಎಂಬಾತನಿಗೆ ಜಾಮೀನು ಲಭಿಸಿತ್ತು. ಈತ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ.
ಏನಿದು ಪ್ರಕರಣ?
2022 ಜುಲೈ 26 ರಂದು ಬೆಳ್ಳಾರೆಯ ಅಕ್ಷಯ್ ಚಿಕನ್ ಸೆಂಟರ್ ಎದುರು ಪ್ರವೀಣ್ ನೆಟ್ಟಾರ್ ಅವರನ್ನು ದುಷ್ಕರ್ಮಿಗಳು ಮಾರಕಾಯುಧದಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಎನ್ ಐಎ ಗೆ ವಹಿಸಲಾಗಿತ್ತು. 26 ಮಂದಿಯನ್ನು ತನಿಖಾಧಿಕಾರಿಗಳು ಬಂಧಿಸಿದ್ದರು.
