ಪ್ರವೀಣ್ ಹತ್ಯೆ ಪ್ರಕರಣ – ಇಂದು ದಕ್ಷಿಣ ಕನ್ನಡ ಎಸ್ಪಿಯಿಂದ ಮಹತ್ವದ ಸುದ್ದಿಗೋಷ್ಟಿ – Vishwanews24
ಪ್ರವೀಣ್ ಹತ್ಯೆ ಪ್ರಕರಣ – ಇಂದು ದಕ್ಷಿಣ ಕನ್ನಡ ಎಸ್ಪಿಯಿಂದ ಮಹತ್ವದ ಸುದ್ದಿಗೋಷ್ಟಿ
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಬಗ್ಗೆ ಪ್ರಮುಖ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದು, ಈ ಕುರಿತು ಮಾಹಿತಿ ನೀಡಲು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಆ. 11ರ ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಟಿ ಕರೆದಿದ್ದಾರೆ.
ಪ್ರಮುಖ ಮೂವರು ಆರೋಪಿಗಳು ಆರು ಜಿಲ್ಲೆಯಲ್ಲಿ ಈವರೆಗೆ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದು, ಬೆಳ್ಳಾರೆ ಆಸುಪಾಸಿನವರೇ ಈ ಕೃತ್ಯದಲ್ಲಿ ಭಾಗಿಯದವರು ಎಂದು ತಿಳಿದುಬಂದಿದೆ. ಹಂತಕರು ಸಾಕಷ್ಟು ವ್ಯವಸ್ಥಿತ ತಯಾರಿ ನಡೆಸಿ ಸಂಚು ರೂಪಿಸಿ ಪ್ರವೀಣ್ ಹತ್ಯೆ ನಡೆಸಿದ್ದಾರೆ. ಹತ್ಯೆಗೆ ಬೈಕ್ ನೀಡಿದ್ದ ಆರೋಪಿ ಸುಳ್ಯದ ಕಬೀರ್ನನ್ನು ಆಗಸ್ಟ್ 9ರಂದು ಬಂಧಿಸಲಾಗಿದೆ. ತನ್ನ ಪರಿಚಯಸ್ಥನ ಬೈಕ್ ಪಡೆದಿದ್ದ ಕಬೀರ್, ಅದನ್ನು ಹಂತಕರಿಗೆ ನೀಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
