ಪ್ರೇಯಸಿ ಕೈಕೊಟ್ಟ ಹಿನ್ನೆಲೆ : ಯುವಕ ನೇಣು ಬಿಗಿದು ಆತ್ಮಹತ್ಯೆ – vishwanews24
ಪ್ರೇಯಸಿ ಕೈಕೊಟ್ಟ ಹಿನ್ನೆಲೆ : ಯುವಕ ನೇಣು ಬಿಗಿದು ಆತ್ಮಹತ್ಯೆ
ರಾಯಚೂರು: ಪ್ರೇಯಸಿ ಕೈಕೊಟ್ಟ ಹಿನ್ನೆಲೆ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರುಜಿಲ್ಲೆಯ ಮಾನ್ವಿ ಪಟ್ಟಣ ಜನತಾ ಹೌಸ್ ಕಾಲೋನಿಯಲ್ಲಿ ನಡೆದಿದೆ. ಮಾನ್ವಿ ನಿವಾಸಿ ವರುಣ್ (26)ಆತ್ಮಹತ್ಯೆಗೆ ಶರಣಾದ ಯುವಕ. ಇನ್ಸ್ಟ್ರಾಗ್ರಾಂ ಮೂಲಕ ಪರಿಚಯವಾಗಿದ್ದ ಯುವತಿ ಜೊತೆ ಮೃತ ವರುಣ್ ಪ್ರೀತಿ ಮಾಡಿದ್ದ. ಬಳಿಕ ಆ ಯುವತಿ ಬೇರೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಿನ್ನೆಲೆ ಮನನೊಂದು ವರುಣ್ ಮನೆಯಲ್ಲಿ ಫ್ಯಾನ್ಗೆ ನೇಣುಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ : ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ – vishwanews24
ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಯುವತಿ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ನಂತರ ಮುಖಾಮುಖಿ ಭೇಟಿಯಾಗಿದ್ದರು. ಬಳಿಕ ರಾಯಚೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ ಯುವತಿ ಜೊತೆ ಪ್ರೇಮಾಂಕುರವಾಗಿದೆ. ಅದರಂತೆ ಕಳೆದ 5 ವರ್ಷದಿಂದ ವರುಣ್, ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ದಿಢೀರ್ ಪ್ರೇಯಸಿಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥವಾಗಿದಕ್ಕೆ ವರುಣ್ ತೀವ್ರ ಬೇಸರಗೊಂಡಿದ್ದ. ಈ ಹಿನ್ನಲೆ ಇಂದು ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನಂತರ ವರುಣ್ ನೇಣಿಗೆ ಶರಣಾಗಿದ್ದಾನೆ.
