ಫೆ. 9ರಿಂದ 18ರವರೆಗೆ ಧರ್ಮಸ್ಥಳದ ಬಾಹುಬಲಿಗೆ ಮಹಾಮಸ್ತಕಾಭಿಷೇಕ – Vishwanews24

Featured, ದಕ್ಷಿಣ ಕನ್ನಡ

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ 39 ಅಡಿ ಎತ್ತರದ ಭಗವಾನ್‌ ಬಾಹುಬಲಿ ಮೂರ್ತಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ 2019ರ ಫೆ.9ರಿಂದ 18ರವರೆಗೆ ನಡೆಯಲಿದೆ ಎಂದು ಬಾಹುಬಲಿ ಮೂರ್ತಿ ಪ್ರತಿಷ್ಠಾಪಕ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಬುಧವಾರ ಪ್ರಕಟಿಸಿದರು.  ಧ ಈ ಐತಿಹಾಸಿಕ ಕ್ಷಣಕ್ಕೆ ಧರ್ಮಸ್ಥಳ ಸಾಕ್ಷಿಯಾಗಲಿದೆ.

ಧರ್ಮಸ್ಥಳದ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪರಮಪೂಜ್ಯ108 ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಮಹಾರಾಜರ ನೇತೃತ್ವದಲ್ಲಿ, ಪೂಜ್ಯ 108 ಆಚಾರ್ಯ ಶ್ರೀಪುಷ್ಪದಂತ ಸಾಗರ ಮುನಿಮಹಾರಾಜರ ಉಪಸ್ಥಿತಿಯಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.

ಮಸ್ತಕಾಭಿಷೇಕ ಸಂದರ್ಭ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮಾರಂಭಕ್ಕೆ ಬರಲು ಒಪ್ಪಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ, ಇತರ ಸಚಿವರನ್ನು ಆಹ್ವಾನಿಸಲಾಗಿದೆ. ಸರಕಾರ ಕಾರ್ಯಕ್ರಮಕ್ಕೆ ವಿಶೇಷ ಸಹಯೋಗ-ಸಹಕಾರ ನೀಡುತ್ತಿದೆ. ಸರಕಾರ ಮಹಾಮಸ್ತಕಾಭಿಷೇಕಕ್ಕೆ ವಿಶೇಷ ನೆರವು ನೀಡಿದೆ. ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದರು.

ನಿತ್ಯವೂ ಪೂಜೆ, ಆರಾಧನೆಗಳು 
ಫೆ.9ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆಯ ಬಳಿಕ ರತ್ನಗಿರಿಗೆ ಆಗ್ರೋದಕ ಮೆರವಣಿಗೆಯೊಂದಿಗೆ ಮಹಾಮಸ್ತಕಾಭಿಷೇಕದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಫೆ.16ರಂದು ಬೆಳಗ್ಗೆೆ 8.45ರ ಮೀನಲಗ್ನದ ಮುಹೂರ್ತದಲ್ಲಿ ಬಾಹುಬಲಿ ಸ್ವಾಮಿಗೆ 1008 ಪುಣ್ಯಾಮೃತ ಕಲಶಗಳಿಂದ ವಿಗ್ರಹ ಪ್ರತಿಷ್ಠಾಪಕ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರಿಂದ ಪ್ರಥಮ ಮಸ್ತಕಾಭಿಷೇಕ ನಡೆಯಲಿದೆ. ಸಂಜೆ ಧ್ವಜಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ನಡೆಯಲಿದೆ.

ಫೆ.11ರಂದು ಬಾಹುಬಲಿ ಪಂಚಮಹಾವೈಭವ ನಿಮಿತ್ತ ಬೆಳಗ್ಗೆೆ 9.30ರಿಂದ ನವಯುಗಾರಂಭ. ಸಂಜೆ 4.30ರಿಂದ ಬಾಲಲೀಲೋತ್ಸವ.

12ರಂದು ಬೆಳಗ್ಗೆೆ ಆದಿನಾಥ ಮಹಾರಾಜರಿಂದ ಸ್ತ್ರೀ ಶಿಕ್ಷಣ, ಕಲೆ, ಸಂಸ್ಕೃತಿ. ಸಂಜೆ ಭೋಗದಿಂದ ತ್ಯಾಾಗದೆಡೆಗೆ.

13ರಂದು ಬೆಳಗ್ಗೆೆ ಚಕ್ರರತ್ನ ಉದಯ, ದಿಗ್ವಿಜಯ. ಸಂಜೆ ವೈಭವದ ಮೆರವಣಿಗೆಯೊಂದಿಗೆ ವೃಷಭಾಚಲದಿಂದ ಅಯೋಧ್ಯೆೆಗೆ ಪಯಣ.

14ರಂದು ಭರತ ಮತ್ತು ಬಾಹುಬಲಿ ಧರ್ಮಯುದ್ಧ. ಸಂಜೆ ಬಾಹುಬಲಿಯ ತ್ಯಾಾಗ ತಪಸ್ಸು.

15ರಂದು ಬೆಳಗ್ಗೆೆ ಸಮವಸರಣ ವೈಭವ, ಸಂಜೆ ಬಾಹುಬಲಿ ಕೇವಲ ಜ್ಞಾನ ನಡೆಯಲಿದೆ.

ಫೆ.16, 17, 18ರಂದು ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ.

ಫೆ.18ರಂದು ಮಧ್ಯಾಹ್ನ ನಂತರ ಧ್ವಜಾವರೋಹಣ, ತೋರಣವಿಸರ್ಜನೆ ನಡೆಯಲಿದೆ.

ಭಗವಾನ್‌ ಶ್ರೀ ಬಾಹುಬಲಿ ಪಂಚಮಹಾವೈಭವ:

ಸಾಂಪ್ರದಾಯಿಕವಾಗಿ ಐದು ದಿನ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮ ನಡೆಸಿ ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ಆದರೆ ಬಾಹುಬಲಿಯೇ ನಾಯಕನಾಗಿರುವುದರಿಂದ ಆತನ ಜೀವನ, ಸಾಧನೆ, ಸಂಯಮ, ತ್ಯಾಗ ಮತ್ತು ಅಹಿಂಸೆ ಪ್ರತಿಬಿಂಬಿಸುವ ಬಾಹುಬಲಿ ಪಂಚ ಮಹಾ ವೈಭವವನ್ನು ಸಾದರಪಡಿಸಲಾಗುವುದು ಎಂದರು.