ಫೇಕ್ ನ್ಯೂಸ್: ಮಂಗಳೂರು ಬೀಚ್ನಲ್ಲಿ ಮತ್ಸ್ಯಕನ್ಯೆ ; ವೈರಲ್ ವೀಡಿಯೊ ಹಿಂದಿನ ನಿಜವಾದ ಕತೆ.. Vishwanews24
ಫೇಕ್ ನ್ಯೂಸ್: ಮಂಗಳೂರು ಬೀಚ್ನಲ್ಲಿ ಮತ್ಸ್ಯಕನ್ಯೆ ; ವೈರಲ್ ವೀಡಿಯೊ ಹಿಂದಿನ ನಿಜವಾದ ಕತೆ.. Vishwanews24
ಮಂಗಳೂರು: ಮಂಗಳೂರಿನ ಬೀಚ್ನಲ್ಲಿ ಮತ್ಸ್ಯಕನ್ಯೆಯೊಂದು ಪತ್ತೆಯಾಗಿದೆ ಎಂಬ ತಲೆಬರಹದಡಿ ವೀಡಿಯೋವೊಂದು ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಚ್ಚಿನ ಜನರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಂಡಿಯಾ ಟುಡೇ ವಾಹಿನಿಯ ಎಎಫ್ಡಬ್ಲ್ಯೂಎ (ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್) ಇದು ಫೇಕ್ ನ್ಯೂಸ್ ಎಂದಿದೆ.
ಮಂಗಳೂರಿನ ಕಡಲತೀರದಲ್ಲಿ ಮತ್ಸ್ಯಕನ್ಯೆ ಕಾಣಿಸಿಕೊಂಡಿದ್ದಾಳೆ ಎಂಬ ಹೇಳಿಕೆಯೊಂದಿಗೆ ಮಹಿಳೆಯೊಬ್ಬಳ ದೇಹದ ಅರ್ಧದಷ್ಟು ಭಾಗ ಮೀನಿನಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಒಂದೆರಡು ಯುವಕರು ಅವಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಮರಳಿನ ಮೇಲೆ ಬಿದ್ದಿರುವ ಮತ್ಸ್ಯಕನ್ಯೆ ಕಸದಿಂದ ಕತ್ತು ಹಿಸುಕಿದಂತೆ ಕೂಗುತ್ತಿರುವುದನ್ನು ಕಾಣಬಹುದು.
ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ) ವಿಡಿಯೋದೊಂದಿಗೆ ತಪ್ಪು ಸಂದೇಶ ರವಾನೆ ಮಾಡಲಾಗಿದೆ ಎಂದು ಕಂಡು ಹಿಡಿದಿದೆ. ವೈರಲ್ ಕ್ಲಿಪಿಂಗ್ನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲಾಗಿದೆ. ಇದು ಸಮುದ್ರದ ಜಲಚರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವೀಡಿಯೋದ ಭಾಗವಾಗಿದೆ.
ಈ ಪೋಸ್ಟ್ ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲೂ ಪ್ರಸಾರವಾಗುತ್ತಿದೆ. AFWA ತನಿಖೆ ವಿಡಿಯೋವನ್ನು ಸೂಕ್ಷ್ಮವಾಗಿ ಆಲಿಸಿ ಅಲ್ಲಿನ ಜನರು ಮಾತನಾಡುವ ಭಾಷೆ ಶ್ರೀಲಂಕಾದ ಸಿಂಹಳ ಭಾಷೆ ಎನ್ನುವುದು ಗೊತ್ತಾಗುತ್ತದೆ ಎಂದು ವರದಿ ಮಾಡಿದ್ದಾರೆ.ಇದು ಶ್ರೀಲಂಕಾ ಮೂಲದ ಟ್ರಿಪ್ ಪಿಸ್ಸೊ ಎಂಬ ಪರಿಶೀಲಿಸಿದ ಯೂಟ್ಯೂಬ್ ಚಾನೆಲ್ನಲ್ಲಿ ಜೂನ್ 7, 2021 ರಂದು ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋದ ಶೀರ್ಷಿಕೆಯಲ್ಲಿ “ಶ್ರೀಲಂಕಾದಲ್ಲಿ ಸಿಕ್ಕಿಬಿದ್ದ ನಿಜವಾದ ಮತ್ಸ್ಯಕನ್ಯೆ” ಎಂದು ಬರೆಯಲಾಗಿತ್ತು.
ಸಮುದ್ರದಲ್ಲಿರುವ ಜಲಚರಗಳ ರಕ್ಷಣೆಯ ಜಾಗೃತಿ ಮೂಡಿಸುವ ವಿಡಿಯೋವನ್ನು ಟ್ರಿಪ್ ಪಿಸ್ಸೊ ಕ್ರೆಡಿಟ್ ಮಾಡಿದೆ. ಇದರ ಸಹ-ಸಂಸ್ಥಾಪಕರಾದ ಉದಯ ಹೆವಾಗಮ ಈ ವಿಡಿಯೋ ಕಾಲ್ಪನಿಕ ಎಂದು ಹೇಳಿದ್ದಾರೆ. ಎಎಫ್ಡಬ್ಲ್ಯೂಎಗೆ ಟ್ರಿಪ್ ಪಿಸ್ಸೊದ ಮುಖ್ಯ ಮಾರ್ಕೆಟಿಂಗ್ ಮ್ಯಾನೇಜರ್ ಹಶಾನ್ ಮಧುಷ್ಕಾ ಮಾತನಾಡಿ, “ನಾವು ಸಾಮಾನ್ಯವಾಗಿ ನಮ್ಮ ಚಾನಲ್ನಲ್ಲಿ ನೈಸರ್ಗಿಕ ಅದ್ಭುತಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತೇವೆ. ಈ ವರ್ಷ ವಿಶ್ವ ಸಾಗರ ದಿನದಂದು (ಜೂನ್ 8) ನಾವು ವಿಶಿಷ್ಟವಾಗಿ ಏನನ್ನಾದರೂ ಮಾಡಲು ಯೋಚಿಸಿದ್ದೆವು.
ಬೆಳಗಾವಿ : 4 ಮಕ್ಕಳೊಂದಿಗೆ ವಿಷ ಸೇವಿಸಿ ತಂದೆ ಆತ್ಮಹತ್ಯೆ – Vishwanews24
