ಫ್ಯೂಚರ್  ಫ್ರೆಂಡ್ಸ್ ಮಣಿಪುರ, ದಿವಂಗತ ವಿಜಿತ್ ಕುಮಾರ್ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಣೆ.

Featured, ಜಿಲ್ಲೆ
Udupi:  ಫ್ಯೂಚರ್  ಫ್ರೆಂಡ್ಸ್ ಮಣಿಪುರ ಇದರ ವತಿಯಿಂದ ಮಣಿಪುರ ಗ್ರಾಮದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ದಿ. ವಿಜಿತ್ ಕುಮಾರ್ ಸ್ಮರಣಾರ್ಥ ವಿದ್ಯಾರ್ಥಿ ವೇತನವನ್ನು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ (ರಿ). ಮಣಿಪುರದ ನವರಾತ್ರಿ ಸಮಾರಂಭದ ವೇದಿಕೆಯಲ್ಲಿ ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಕಾಪು ಶಾಸಕ ಶ್ರೀ. ಲಾಲಾಜಿ ಆರ್. ಮೆಂಡನ್, ಫ್ಯೂಚರ್ ಫ್ರೆಂಡ್ಸ್ ಇವರ ಕಾರ್ಯವನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘದ ಅಧ್ಯಕ್ಷರಾದ ಶ್ರೀ. ಜಯಶೇಖರ್ ಪಾಲನ್, ಮಣಿಪುರ ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಪಾಲನ್, ಪಂಚಾಯತ್ ಸದಸ್ಯೆ ಪದ್ಮ ಕೋಟ್ಯಾನ್ ಹಾಗೂ ಫ್ಯೂಚರ್ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.