ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ : ಒಂದೇ ಕುಟುಂಬದ ಐವರು ಸಾವು! Vishwanews24

Featured, ರಾಷ್ಟ್ರ ನ್ಯೂಸ್

ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ : ಒಂದೇ ಕುಟುಂಬದ ಐವರು ಸಾವು!

ಚಂಡೀಗಢ: ಮನೆಯೊಂದರಲ್ಲಿ ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟಗೊಂಡು ಮೂವರು ಮಕ್ಕಳು ಸೇರಿಂತೆ ಒಂದೇ ಕುಟುಂಬದ ಐವರು ಮೃತಪಟ್ಟ ದುರ್ಘಟನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ.

ಮೃತರನ್ನು ಯಶಪಾಲ್ ಘಾಯ್ (70), ರುಚಿ ಘಾಯ್ (40), ಮನ್ಶಾ (14), ದಿಯಾ (12) ಮತ್ತು ಅಕ್ಷಯ್ (10) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು, ಸ್ಫೋಟದಿಂದಾಗಿ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ.

ಸ್ಫೋಟಕ್ಕೆ ನಿಖರವಾದ ಕಾರಣ ಕಂಡುಹಿಡಿಯಲು ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಯಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉಡುಪಿ: ತಂದೆಯನ್ನೇ ಕೊಲೆಗೈದ ಪ್ರಕರಣ; ಆರೋಪಿ ಮಗ ಆರೆಸ್ಟ್‌ – Vishwanews24

Leave a Reply