ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೃಷ್ಟಿ” ಅತ್ಯುತ್ತಮ ಯೋಜನ ಪ್ರಶಸ್ತಿ – Vishwanews24

Featured, ಉಡುಪಿ

ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೃಷ್ಟಿ” ಅತ್ಯುತ್ತಮ ಯೋಜನ ಪ್ರಶಸ್ತಿ

ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿದ್ಯಾರ್ಥಿಗಳಾದ ಮಹಮ್ಮದ್ ಅತೀಕ್, ಕೆ ಎನ್ ಶ್ರೀಶ, ರೋಹನ ಯು ಪಾಲನ್ ಇವರು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಕಾರ್ತಿಕ್ ವಿ ಇವರ ನೇತೃತ್ವದಲ್ಲಿ ಅಡಿಕೆ
ಮರವನ್ನು ಏರುವ ಮತ್ತು ಮಳೆಗಾಲದ ಸಮಯದಲ್ಲಿ ಶಿಲೀಂಧ್ರದಿ0ದ ಅಡಿಕೆ ಬೆಳೆಯನ್ನು ರಕ್ಷಿಸಲು ಕೀಟನಾಶಕವನ್ನು ಸಿಂಪಡಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.

ವಿ ಎಸ್ ಎಸ್ ಟ್ರಸ್ಟ್ ಮತ್ತು ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾನಿಲಯ ಬೆಳಗಾವಿ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ಸಹಯೋಗದೊಂದಿಗೆ ಬೆಂಗಳೂರಿನ ಬಿ ಎಮ್ ಎಸ್ ತಾಂತ್ರಿಕ ಕಾಲೇಜಿನಲ್ಲಿ ಜುಲೈ ೨೫ ರಿಂದ ೨೭ರವರೆಗೆ ಆಯೋಜಿಸಲಾದ ರಾಜ್ಯಮಟ್ಟದ ಇಂಜಿನಿಯರಿ0ಗ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ “ಸೃಷ್ಟಿ”ಯಲ್ಲಿ ಅತ್ಯುತ್ತಮ ಪ್ರಾಜೆಕ್ಟ್ ಸಾಂತ್ವನ ಪ್ರಶಸ್ತಿ ದೊರೆತಿದೆ. ಈ ಪ್ರಾಜೆಕ್ಟ್
ಪ್ರದರ್ಶನದಲ್ಲಿ ಕರ್ನಾಟಕದಾದ್ಯಂತ ೧೦೪ ಕಾಲೇಜಿನ ೧೭೫೦ ವಿದ್ಯಾರ್ಥಿಗಳು ಭಾಗವಹಿಸಿವು. ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿತ್ತು.

ವಿದ್ಯಾರ್ಥಿಗಳ ಈ ಯಂತ್ರವು ಉದ್ಯಮ ಮತ್ತು ಕೃಷಿ ವಲಯದಲ್ಲಿನ ಸಮಸ್ಯೆಗಳಿಗೆ ಪರಿಹರಿಸಲು ಸಹಕಾರಿಯಾಗಿದೆ. ಈ ಸ್ಪರ್ಧೆಯ ಬಹುಮಾನ
ವಿತರಣೆಯು ಬೆಂಗಳೂರಿನ ಬಿ ಎಮ್ ಎಸ್ ಕಾಲೇಜಿನಲ್ಲಿ ವಿಟಿಯು ಬೆಳಗಾವಿಯ ಉಪಕುಲಪತಿ ಡಾ. ಕರಿಸಿದ್ದಪ್ಪ ರವರ ನೇತೃತ್ವದಲ್ಲಿ ನಡೆಯಿತು.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ,ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್
ಮತ್ತು ಕಾಲೇಜಿನ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

 

Leave a Reply