ಬಂಟ್ವಾಳ: SSLC ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ – vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: SSLC ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ: ಸ್ಪಷ್ಟವಾದ ಕಾರಣವಿಲ್ಲದೆ ಎಸ್.ಎಸ್.ಎಲ್.ಸಿ.‌ ವಿದ್ಯಾರ್ಥಿಯೋರ್ವ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗಸ್ಟ್ 7 ರಂದು ಬುಧವಾರ ರಾತ್ರಿ ವೇಳೆ ನಡೆದಿದೆ.

ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ಬಡಕಬೈಲಿನ ಖಾಸಗಿ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ ಈತ ಕಲಿಕೆ ವಿಚಾರದಲ್ಲಿ ಆತ್ಮಹತ್ಯೆ ‌ಮಾಡಿಕೊಂಡಿರಬಹುದು ಎಂಬುದನ್ನು ಮನೆಯವರು ಶಂಕಿಸಿದ್ದಾರೆ.

ಕಾರ್ಕಳ: ಸಾರ್ವಜನಿಕ ರಸ್ತೆಯಲ್ಲಿ ಮಲಗಿ ಅವಾಂತರ ಸೃಷ್ಟಿಸಿದ ಕುಡುಕ – vishwanews24

ಅಗಸ್ಟ್ 7 ರಂದು ಬುಧವಾರ ರಾತ್ರಿ ಸುಮಾರು 7.30 ಗಂಟೆಗೆ ಸ್ನಾನ ಮಾಡಲೆಂದು ಬಚ್ಚಲು ಕೋಣೆಗೆ ತೆರಳಿದ ಮಗ 8 ಗಂಟೆಯಾದರೂ ವಾಪಸ್ ಬಾರದೇ ಇರುವುದನ್ನು ಕಂಡ ತಾಯಿ ಬಾಗಿಲು ಬಡಿದರೂ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿದಾಗ ಈತ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವುದು ಗೊತ್ತಾಗಿದೆ.

ಕೂಡಲೇ ಬಾಲಕನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷೆ ನಡೆಸಿದಾಗ ಆತ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ. 10 ರಂದು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವಿಸ್ತರಿತ ಹಾಗೂ ನವೀಕರಣಗೊಂಡ  ಆಡಳಿತ ಕಚೇರಿ ಉದ್ಘಾಟನೆ : ಯಶ್ಪಾಲ್ ಸುವರ್ಣ – vishwanews24

Leave a Reply