ಬಂಟ್ವಾಳ: ವಿಹಿಂಪ – ಬಜರಂಗ ದಳ ಕಟ್ಟೆಗೆ ಹಾನಿ – Vishwanews24
ಬಂಟ್ವಾಳ: ವಿಹಿಂಪ – ಬಜರಂಗ ದಳ ಕಟ್ಟೆಗೆ ಹಾನಿ – Vishwanews24
ಬಂಟ್ವಾಳ: ಇಲ್ಲಿನ ಮಂಡಾಡಿ ಬಳಿ ವಿಹಿಂಪ – ಬಜರಂಗ ದಳ ಮಂಡಾಡಿ ಶಾಖೆಯ ವತಿಯಿಂದ ನಿರ್ಮಿಸಲಾಗಿದ್ದ ಕಟ್ಟೆಯೊಂದಕ್ಕೆ ಯಾರೋ ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ರಾತ್ರಿ ವೇಳೆ ಯಾರೋ ಹಾನಿ ಮಾಡಿರುವ ಸಾಧ್ಯತೆ ಇದ್ದು, ಘಟನಾ ಸ್ಥಳದಲ್ಲಿ ಸಂಘಟನೆಯ ಕಾರ್ಯಕರ್ತರು ಸೇರಿದ್ದರು.
ಬಂಟ್ವಾಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಸಂಘಟನೆ ಪ್ರಮುಖರು ಆಗ್ರಹಿಸಿದ್ದಾರೆ.
