ಬಂಟ್ವಾಳ: ಹಣದಾಸೆಗೆ ಮನೆಯಲ್ಲೇ ಅಕ್ರಮ ಸ್ವಿಮ್ಮಿಂಗ್ ಫೂಲ್ ನಿರ್ಮಿಸಿ ಬಾಡಿಗೆ ನೀಡುತ್ತಿರುವ ಇಸ್ರೇಲ್ ಉದ್ಯಮಿ – Vishwanews24
ಬಂಟ್ವಾಳ: ಹಣದಾಸೆಗೆ ಮನೆಯಲ್ಲೇ ಅಕ್ರಮ ಸ್ವಿಮ್ಮಿಂಗ್ ಫೂಲ್ ನಿರ್ಮಿಸಿ ಬಾಡಿಗೆ ನೀಡುತ್ತಿರುವ ಇಸ್ರೇಲ್ ಉದ್ಯಮಿ
ಮಂಗಳೂರು : ಬಂಟ್ವಾಳದಲ್ಲಿ ಇಸ್ರೇಲ್ ಉದ್ಯಮಿಯೊಬ್ಬ ಹಣದಾಸೆಗೆ ಅಕ್ರಮವಾಗಿ ಸ್ವಿಮ್ಮಿಂಗ್ ಫೂಲ್‌ನಿರ್ಮಿಸಿಕೊಂಡು ಮೋಜು ಮಸ್ತಿ ಮಾಡುತ್ತಿರೋ ಘಟನೆ ಬೆಳಕಿಗೆ ಬಂದಿದೆ.
ಬೇಸಿಗೆಯಲ್ಲಿ ಸ್ವಿಮ್ಮಿಂಗ್ ಫೂಲ್‌ನಲ್ಲಿ ಆಟೋವಾಡೋದಕ್ಕೆ ಜನರು ಇಷ್ಟ ಪಡುವುದು ಸಹಜ. ಈ ನಿಟ್ಟಿನಲ್ಲಿ ಇಸ್ರೇಲ್ ಉದ್ಯಮಿಯೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವಿನ ಬಸ್ತಿಕೋಡಿಯಲ್ಲಿರುವ ತಮ್ಮ ಮನೆಯಲ್ಲೇ ಅಕ್ರಮವಾಗಿ ಸ್ವಿಮ್ಮಿಂಗ್ ಫೂಲ್ ನಿರ್ಮಿಸಿಕೊಂಡು ಮೋಜಿಗಾಗಿ ನೀಡಿ ಹಣ ಮಾಡುತ್ತಿರೋ ವಿವಾದಕ್ಕೆ ಗುರಿಯಾಗಿದ್ದಾನೆ.ಇಸ್ರೇಲ್ ಉದ್ಯಮಿ ಜಾನ್‌ಎಂದು ಗುರುತಿಸಲಾಗಿದೆ. ಇಲ್ಲಿ ಅಪಾಯಕಾರಿ ಸ್ವಂಟ್ ಮಾಡುತ್ತಾ, ಯುವಕರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿರುತ್ತಾರೆ.
ಇಸ್ರೇಲ್ ಉದ್ಯಮಿ ಜಾನ್ ಎಂಬವರು ಹಣದಾಸೆಗೆ ಮನೆಯನ್ನೆ ರೆಸಾರ್ಟ್ ನಿರ್ಮಿಸಿಕೊಂಡು ಸ್ವಿಮ್ಮಿಂಗ್ ಫೂಲ್ ಗಂಟೆಗೆ ನೂರು ರೂಪಾಯಿಯಂತೆ ಕೊಡುವಂತೆ ಯುವಕರ ಮೋಜು ಮಸ್ತಿ ಮಾಡೋದಕ್ಕೆ ಅವಕಾಶ ನೀಡಿದ್ದಾರೆ, ಸ್ವಿಮ್ಮಿಂಗ್ ಫೂಲ್‌ನಲ್ಲಿ ಯಾವುದೇ ಸೆಕ್ಯೂರಿಟಿ, ಲೈಫ್ ಜಾಕೆಟ್ ಕೂಡ ಇಲ್ಲಎಂದು ಸುತ್ತಮುತ್ತಲಿನ ಜನರು ಕಿಡಿಕಾರುತ್ತಿದ್ದಾರೆ. ಕೂಡಲೇ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
