ಬಜ್ಪೆ ಪೊಲೀಸರ ಅಮಾನತು : ಸರಕಾರ ಅಧಿಕಾರಿಗಳನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡದೆ ಇರುವುದು ಬಹಳ ದುರಂತ : ಯು.ಟಿ ಖಾದರ್ ಅಸಮಾಧಾನ- Vishwanews24

Featured, ದಕ್ಷಿಣ ಕನ್ನಡ

ಬಜ್ಪೆ  ಪೊಲೀಸರ ಅಮಾನತು : ಸರಕಾರ ಅಧಿಕಾರಿಗಳನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡದೆ ಇರುವುದು ಬಹಳ ದುರಂತ : ಯು.ಟಿ ಖಾದರ್ ಅಸಮಾಧಾನ 

ಮಂಗಳೂರು: ಯಾವುದೇ ರೀತಿಯ ವಿಮರ್ಶೆ ಮಾಡದೆ, ತನಿಖೆ ಕೈಗೊಳ್ಳದೆ ಬಜ್ಪೆ ಪೊಲೀಸರನ್ನು ಅಮಾನತುಗೊಳಿಸಿದ ಬಗ್ಗೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆಯಲ್ಲಿ ಹೇಳಿಕೆ ನೀಡಿರುವ ಅವರು ‘ಬಜ್ಪೆ ಪೊಲೀಸ್ ಠಾಣೆಯ ಓರ್ವ ಇನ್‌ಸ್ಪೆಕ್ಟರ್ ಹಾಗೂ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಬಗ್ಗೆ ತೀವ್ರ ಅಸಮಾಧಾನವಿದೆ.

ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಇಂತಹ ಘಟನೆಗಳು ಕೆಲವು ಸಮಾಜದ್ರೋಹಿ ಶಕ್ತಿಗಳು ಬೇಕಾಬಿಟ್ಟಿ ಮಾತನಾಡಲು ಹಾಗೂ ಕಾನೂನು ಕೈಗೆತ್ತಿಕೊಳ್ಳಲು ಪ್ರೇರಣೆಯಾಗುತ್ತದೆ.

ಈ ಸರಕಾರ ಅಧಿಕಾರಿಗಳನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡದೆ ಇರುವುದು ಬಹಳ ದುರಂತ ಎಂದು ಯು.ಟಿ.ಖಾದರ್ ಅವರು ಪತ್ರಿಕಾ ಪ್ರಕಟನೆಯ ಮೂಲಕ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸುರೇಶ್ ಎರ್ಮಾಳು ಆಯ್ಕೆ – Vishwanews24

Leave a Reply