ಬಡ ಮಕ್ಕಳ ಶೈಕ್ಷಣಿಕ, ಅನಾರೋಗ್ಯ ಪೀಡಿತರ ನೆರವಿಗಾಗಿ ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ,ಇವರ ವತಿಯಿಂದ ಡಿಸೆಂಬರ್ 9 ಶನಿವಾರ ಜಿಲ್ಲಾ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟ..
ಕಾಪು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ತಿರ್ಲಪಲ್ಕೆ ಮೂಡಬೆಳ್ಳೆ ಇದರ ವತಿಯಿಂದ 25 ವರ್ಷದ ಸವಿ ನೆನಪಿಗಾಗಿ ಡಿಸೆಂಬರ್ _9 ಶನಿವಾರದಂದು ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವು ಮೂಡಬೆಳ್ಳೆಯ ಸೈಂಟ್ ಲಾರೆನ್ಸ್ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಪು ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕ ರಾಘವ ಕೋಟ್ಯಾನ್ ತೋಕೋಳಿ ತಿಳಿಸಿದರು.
ಬಡ ಮಕ್ಕಳ ಶೈಕ್ಷಣಿಕ, ಅನಾರೋಗ್ಯ ಪೀಡಿತರ ನೆರವಿಗಾಗಿ ಈ ಪಂದ್ಯಾಟ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನ ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ,ಆಶೀರ್ವಚನ ಬೆಳ್ಳೆ ಚರ್ಚ್ ನ ಧರ್ಮಗುರು ಫಾ.ರೆ/ಕ್ಲೆಮೆಂಟ್ ಮಸ್ಕರೇನ್ಹಸ್ ಮಾಡಲಿದ್ದು ಸಮಾಜದ ವಿವಿಧ ಗಣ್ಯರು ಉಪಸ್ಥಿತಿ ಇರಲಿದ್ದಾರೆ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು,ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಸೇರಿದಂತೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜೇಂದ್ರನಾಥ್ ಬೆಳ್ಳೆ, ಎಂ.ರಮೇಶ,ರಘಶ್ಚಂದ್ರನಾಥ್ ಸಾಲ್ಯಾನ್ ತಿರ್ಲಪಲ್ಕೆ ಉಪಸ್ಥಿತರಿದ್ದರು.
ಈ ಪಂದ್ಯಾಟವು ಮುಕ್ತ ಕ್ರಿಕೆಟ್ ಪಂದ್ಯಾಕೂಟ ಆಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ 9844780280,9900912335 ಸಂಪರ್ಕಿಸಲು ಕೋರಲಾಗಿದೆ .


