ಬಪ್ಪನಾಡು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ : ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ – Vishwanews24

Featured, ದಕ್ಷಿಣ ಕನ್ನಡ

ಕೆಲಸ ಮಾಡಿ ಬದುಕಲು ಜಾತಿಯನ್ನು ನೋಡಬಾರದು..

ಯಾರೇ ಆಗಲಿ ಅವರ ವ್ಯಾಪಾರಕ್ಕೆ ಅಡ್ಡಿ ಮಾಡಬಾರದು..

ಬಪ್ಪ ಬ್ಯಾರಿ ಎಂಬ ಮುಸ್ಲಿಂ ಕ್ಷೇತ್ರವನ್ನು ಜಿರ್ಣೋದ್ಧಾರ ಮಾಡಿದ ಇತಿಹಾಸವಿದೆ..

ಭಕ್ತರು ಕ್ಷೇತ್ರದ ಸೌಹಾರ್ದತೆಗೆ, ಸಾಮರಸ್ಯಕ್ಕೆ ಪ್ರೋತ್ಸಾಹ ನೀಡಬೇಕು..

ಮಂಗಳೂರು: ಬಪ್ಪನಾಡು ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದ ವಿಚಾರವಾಗಿ ಕ್ಷೇತ್ರದ ಆಡಳಿತ ಮಂಡಳಿ ಸಾಮರಸ್ಯವನ್ನು ಎತ್ತಿ ಹಿಡಿದಿದೆ.

ಬಪ್ಪನಾಡು ಕ್ಷೇತ್ರದ ಹಿಂದೂ ಧಾರ್ಮಿಕ ಮುಖಂಡ, ಮಾಜಿ ಮೊಕ್ತೇಸರ ಹರಿಕೃಷ್ಣ ಪುನರೂರು ಮಾತನಾಡಿ, ಭಾರತದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕೆಲಸ ಮಾಡಿ ಬದುಕಲು ಜಾತಿಯನ್ನು ನೋಡಬಾರದು. ಮತಾಂತರ ಮಾಡಿದರೆ ಅವರನ್ನು ಪ್ರಶ್ನೆ ಮಾಡಬಹುದು. ಆದರೆ ಬದುಕಲು ಅಡ್ಡಗಾಲು ಹಾಕುವುದು ಸರಿಯಲ್ಲ ಎಂದು ತಿಳಿಸಿದರು.

ಯಾರೇ ಆಗಲಿ ಅವರ ವ್ಯಾಪಾರಕ್ಕೆ ಅಡ್ಡಿ ಮಾಡಬಾರದು. ನಾನು 11 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸರನಾಗಿ ಕೆಲಸ ಮಾಡಿದ್ದೇನೆ. ಈ ದೇವಸ್ಥಾನಕ್ಕೆ ಕೈ ಮುಗಿಯಲು ಮುಸ್ಲಿಂ, ಕ್ರೈಸ್ತರು ಬರುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ನಾವೇ ಜಗಳವನ್ನು ಎಳೆಯಬಾರದು ಎಂದು ಮನವಿ ಮಾಡಿದರು.

ಈ ಕ್ಷೇತ್ರ 32 ಗ್ರಾಮಗಳಿಗೆ ಸಂಬಂಧಪಟ್ಟ ದೇವಸ್ಥಾನವಾಗಿದೆ. ಮತಾಂತರ ಮಾಡಿದರೆ ಪ್ರತಿಭಟನೆ ಮಾಡಬಹುದು. ಆದರೆ ಸೌಹಾರ್ದಯುತವಾಗಿ ಬಾಳಲು ಅಡ್ಡಿ ಮಾಡಬಾರದು. ಬಪ್ಪ ಬ್ಯಾರಿ ಎಂಬ ಮುಸ್ಲಿಂ ಕ್ಷೇತ್ರವನ್ನು ಜಿರ್ಣೋದ್ಧಾರ ಮಾಡಿದ ಇತಿಹಾಸವಿದೆ ಎಂದರು.

ಭಕ್ತರು ಕ್ಷೇತ್ರದ ಸೌಹಾರ್ದತೆಗೆ, ಸಾಮರಸ್ಯಕ್ಕೆ ಪ್ರೋತ್ಸಾಹ ನೀಡಬೇಕು. ಈ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಕೆಲವರು ಸೌಹಾರ್ದತೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಗೆ ಆ ಉದ್ದೇಶ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನ ಮಳೆ ನಿರೀಕ್ಷೆ ; ಯಲ್ಲೋ ಅಲರ್ಟ್‌’ ಘೋಷಣೆ – Vishwanews24

Leave a Reply