ಬರೋಬ್ಬರಿ ನಾಲ್ಕು ವರ್ಷದ ನಂತರ ಕಾಪು ಪುರಸಭೆಯ ಸಾಮಾನ್ಯ ಸಭೆ ಆರಂಭ :ನೂರಾರು ಸಮಸ್ಯೆಗಳಿಗೆ ಸಿಗಬಹುದೇ ಪರಿಹಾರ ..? vishwanews24
ಬರೋಬ್ಬರಿ ನಾಲ್ಕು ವರ್ಷದ ನಂತರ ಕಾಪು ಪುರಸಭೆಯ ಸಾಮಾನ್ಯ ಸಭೆ ಆರಂಭ :ನೂರಾರು ಸಮಸ್ಯೆಗಳಿಗೆ ಸಿಗಬಹುದೇ ಪರಿಹಾರ
ಕಾಪು: ಪುರಸಭಾ ಚುನಾವಣೆ ನಡೆದು ಬರೊಬ್ಬರಿ ನಾಲ್ಕು ವರ್ಷಗಳ ನಂತರ ನೂತನ ಸದಸ್ಯರ ಸಮ್ಮುಖದ ಮೊದಲ ಸಾಮಾನ್ಯ ಸಭೆ ಗುರುವಾರ ಪುರಸಭೆ ಇಂದಿರಾಗಾಂಧಿ ಸಭಾಂಗಣದಲ್ಲಿ ಪ್ರಾರಂಭವಾಗಿದೆ.
ಸುಮಾರು ನಾಲ್ಕು ವರ್ಷದಿಂದ ಪುರಸಭಾ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿ, ಕೆಲಸ ಕಾರ್ಯಗಳಿಗೆ ಇಂದಿನ ಸಾಮಾನ್ಯ ಸಭೆಯಲ್ಲಿ ಪರಿಹಾರ ಸಿಗಬಹುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ವಿಶೇಷವಾಗಿ ಬೀದಿನಾಯಿಗಳ ಉಪಟಳ,ಒಳಚರಂಡಿ ವ್ಯವಸ್ಥೆಯ ಅವ್ಯವಸ್ಥೆ, ಬೀದಿದೀಪಗಳ ಸಮಸ್ಯೆ,ಸಂತೆಮಾರುಕಟ್ಟೆಯ ಸಮಸ್ಯೆ,ಗುಂಡಿ ಬಿದ್ದಿರುವ ರಸ್ತೆಗಳ ,ಹೋಟೆಲ್ ತ್ಯಾಜ್ಯ, ಸೇರಿದಂತೆ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಬಹುದೇ ಎಂಬ ನಿರೀಕ್ಷೆ ಇದೆ.
