ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ – Vishwanews24
ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ
ಪುಣೆ: ಹಿರಿಯ ನಟ ವಿಕ್ರಮ್ ಗೋಖಲೆ ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. ಮರಾಠಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟ ವಿಕ್ರಮ್ ಗೋಖಲೆ ನಟಿಸಿದ್ದರು.
ಈ ಕುರಿತಂತೆ ಅವರ ಸ್ನೇಹಿತರು ಮಾಹಿತಿ ನೀಡಿದ್ದು, ಹಿರಿಯ ನಟ ವಿಕ್ರಮ್ ಗೋಖಲೆ ಅವರು, ಇಂದು ಪುಣೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ನಟ ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು. ಇಂತಹ ಅವರು ಇದೀಗ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ..
‘ಅಗ್ನಿಪಥ್’, ‘ಖುದ ಗವಾಹ್’, ‘ಇನ್ಸಾಫ್’, ‘ಸಲಿಂ ಲಂಗಡೆ ಪೆ ಮತ್ ರೊ’, ‘ಭೂಲ್ ಭುಲಯ್ಯ’, ‘ಮಿಷನ್ ಮಂಗಲ್’, ‘ಅಯಾರಿ’ ಮುಂತಾದ ಸಿನಿಮಾಗಳಲ್ಲಿ ವಿಕ್ರಮ್ ನಟಿಸಿದ್ದಾರೆ.
ವಿಕ್ರಮ್ ಗೋಖಲೆ ಅವರಿಗೆ ‘ಅನುಮತಿ’ ಎನ್ನುವ ಮರಾಠಿ ಚಿತ್ರಕ್ಕೆ 2013ರಲ್ಲಿ ಉತ್ತಮ ನಟ ಕ್ಯಾಟಗರಿಯಲ್ಲಿ 60ನೇ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.
