ಬಾಲ್ಯದ ಗೆಳತಿ ಜೊತೆ ಆ್ಯಕ್ಷನ್ ಪ್ರಿನ್ಸ್‌ ಧ್ರುವ ನಿಶ್ಚಿತಾರ್ಥ

Featured, ರಾಜ್ಯ ನ್ಯೂಸ್, ಸಿನಿಮಾ

ಬೆಂಗಳೂರು:ಸ್ಯಾಂಡಲ್‌ವುಡ್‌ನ  ಆ್ಯಕ್ಷನ್  ಪ್ರಿನ್ಸ್‌, ಅದ್ಧೂರಿ, ಬಹದ್ದೂರ್‌, ಭರ್ಜರಿ ಚಿತ್ರಗಳ ಹೀರೋ ಧ್ರುವ ಸರ್ಜಾಗೆ ಇದೀಗ ಕಂಕಣ ಭಾಗ್ಯ ಕೂಡಿ ಬಂದಿದೆ.​ ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಜತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.

ಡಿಸೆಂಬರ್‌ 10ಕ್ಕೆ ನಿಶ್ಚಿತಾರ್ಥ : ಬಹುದಿನದ ಗೆಳತಿ ಪ್ರೇರಣಾ ಶಂಕರ್‌ ಜೊತೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ. ನೆರೆ ಮನೆಯ ಸ್ನೇಹಿತೆಯಾಗಿರೋ ಪ್ರೇರಣಾ‌ ಜೊತೆ ಧ್ರುವ ಡಿಸೆಂಬರ್ 10ರಂದು ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ. ಧ್ರುವ ಅವರ ಮುಂದಿನ ಚಿತ್ರ ಪೊಗರು ಬಿಡುಗಡೆಯಾದ ನಂತರ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಧ್ರುವ ಹುಟ್ಟುಹಬ್ಬದ ದಿನ ತಾವು ಶೀಘ್ರದಲ್ಲೇ ಲವ್ ಮ್ಯಾರೇಜ್ ಆಗುವುದಾಗಿ ಹೇಳಿದ್ದರು. ಕಳೆದ ಕೆಲ ತಿಂಗಳ ಹಿಂದೆ ಧ್ರುವ ಅಣ್ಣ ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರನ್ನು ವರಿಸಿದ್ದರು,  ಮದುವೆಯಾಗಿತ್ತು. ತಮ್ಮ ಬಹುಕಾಲದ ಗೆಳತಿಯ ಜೊತೆ ಮದುವೆಯಾಗಲು ಧ್ರುವ ಸರ್ಜಾ ನಿರ್ಧರಿಸಿದ್ದಾರೆ.