ಬಿಜೆಪಿ ನಾಟಕಗಳು ತೆಲಂಗಾಣದಲ್ಲಿ ನಡೆಯುವುದಿಲ್ಲ : ಕೆಟಿ ರಾಮರಾವ್ -Vishwanews24
ಹೈದರಾಬಾದ್, : ಕರ್ನಾಟಕದಲ್ಲಿ ಮಾಡಿದಂತೆ ತೆಲಂಗಾಣದಲ್ಲಿಯೂ ಬಿಜೆಪಿ ನಾಟಕಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯದ ಜನರು ಒಡೆದು ಆಳುವ ರಾಜಕೀಯವನ್ನು ಬೆಂಬಲಿಸುವುದಿಲ್ಲ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಸೋಮವಾರ ಹೇಳಿದ್ದಾರೆ.
ಕೆಟಿಆರ್ ಎಂದೇ ಹೆಸರಾಗಿರುವ ರಾಮರಾವ್, ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲ ಧರ್ಮಗಳ ಜನರು ಸಹಬಾಳ್ವೆಯಿಂದ ಶಾಂತಿಯುತವಾಗಿ ಇರುವುದನ್ನು ಬಿಜೆಪಿ ನಾಯಕರು ಬಯಸುವುದಿಲ್ಲ. ಅವರು ಸಮುದಾಯಗಳನ್ನು ಒಡೆದು ಅವರನ್ನು ಆಳುವುದಕ್ಕೆ ಬಯಸುತ್ತಿದ್ದಾರೆ. ಇಂತಹ ತಂತ್ರಗಳು ತೆಲಂಗಾಣದಲ್ಲಿ ನಡೆಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
