ಬಿಜೆಪಿ ಪರ ಅಲೆಯಿಂದಲೇ ನಾವು ಸೋಲು ಅನುಭವಿಸಿದ್ದೇವೆ : ಪ್ರಮೋದ್ ಮಧ್ವರಾಜ್ -Vishwanews24
ಉಡುಪಿ: ಬಿಜೆಪಿ ಪರ ಅಲೆಯಿಂದಲೇ ನಾವು ಸೋಲು ಅನುಭವಿಸಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪರಾಜಿತ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮೋದಿ ಅಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಸೋಲುಂಟಾಗಿದ್ದು ಈ ಹಿನ್ನಲೆಯಲ್ಲಿ ತಮ್ಮ ಸೋಲಿನ ಬಗ್ಗೆ ಪ್ರಮೋದ್ ಮಧ್ವರಾಜ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಪರವಾಗಿ ಅಲೆಯು ಇದ್ದಾಗ ನಾವೆಲ್ಲರೂ ಅಸಹಾಯಕರಾಗುತ್ತೇವೆ. ಆದಾಗ್ಯೂ ಮತದಾರರು ನಮ್ಮ ಮೇಲಧಿಕಾರಿಗಳಾಗಿದ್ದಾರೆ. ಹೀಗಾಗಿ ಜನತೆ ನೀಡಿದ ತೀರ್ಪನ್ನು ಯಾವುದೇ ಕಹಿ ಇಲ್ಲದೆ ನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಭಾರೀ ಅಂತರದ ಮುನ್ನಡೆ ಸಾಧಿಸಿದ್ದು ಸತತ ಎರಡನೇ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ.
