ಬಿಜೆಪಿ ಸರ್ಕಾರ ನಮ್ಮನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ; SDPI ಬ್ಯಾನ್ ಮಾಡಲು ಚಿಂತನೆ ನಡೆಸ್ತಿದ್ದಾರೆ : SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ – Vishwanews24

Featured, ರಾಜ್ಯ ನ್ಯೂಸ್

ಬಿಜೆಪಿ ಸರ್ಕಾರ ನಮ್ಮನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ; SDPI ಬ್ಯಾನ್ ಮಾಡಲು ಚಿಂತನೆ ನಡೆಸ್ತಿದ್ದಾರೆ : SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಮಂಗಳೂರು: ಎಸ್​ಡಿಪಿಐ ಕೂಡ ಬ್ಯಾನ್ ಮಾಡಲು ಚಿಂತನೆ ನಡೆಸ್ತಿದ್ದಾರೆ. ಬಿಜೆಪಿ ಸರ್ಕಾರ ನಮ್ಮನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ.

SDPI ನಾಯಕರ ಮೇಲೆ ಸುಳ್ಳು ಕೇಸ್ ಹಾಗೂ ಬಂಧನ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ SDPI ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪಿಎಫ್​ಐ ಮಾದರಿ ಎಸ್​ಡಿಪಿಐ ಕೂಡ ಬ್ಯಾನ್ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ: ಅನ್ಯಜಾತಿ ಯುವಕನೊಂದಿಗೆ ಮಗಳ ಪ್ರೀತಿ.. ಮದುವೆ ಮಾಡುವುದಾಗಿ ನಂಬಿಸಿ ತಂದೆಯಿಂದ ಪ್ರೇಮಿಗಳ ಮರ್ಯಾದಾ ಹತ್ಯೆ; ಮೂವರ ಬಂಧನ – Vishwanews24

ಬಿಜೆಪಿ ಸರ್ಕಾರ ಪೊಲೀಸರನ್ನ ಬಳಸಿಕೊಂಡು ನಮ್ಮನ್ನ ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ. ಎಸ್​ಡಿಪಿಐ ನೋಂದಾಯಿತ ರಾಜಕೀಯ ಪಕ್ಷ. 13 ವರ್ಷಗಳಿಂದ ಆಯೋಗಕ್ಕೆ ದಾಖಲೆ ನೀಡುತ್ತ ಬಂದಿದೆ. PFI ಬ್ಯಾನ್​ ಬಳಿಕ SDPI ನಿಷೇಧಿಸುವ ಚಿಂತನೆ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರ್ವಾಧಿಕಾರಿ ಧೋರಣೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿರುವ ಎಸ್​ಡಿಪಿಐನ 2 ಕಚೇರಿಗೆ ನುಗ್ಗಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಾವು ಎಚ್ಚರಿಕೆಯನ್ನು ಕೊಡುತ್ತೇವೆ. ನಾವು ನಿಮ್ಮ ಕಿರುಕುಳದಿಂದ ಹಿಂದೆ ಸರಿಯುವುದಿಲ್ಲ. ಸೈದ್ಧಾಂತಿಕವಾಗಿ ಎದುರಿಸಿ, ಖಾಕಿ ಬಿಟ್ಟು ಹೆದರಿಸೋದಲ್ಲ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ SDPI ನ ರಾಜ್ಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಸೇರಿ ಕೆಲ SDPI ಮುಖಂಡರು ಭಾಗಿಯಾಗಿದ್ದಾರೆ.

ಮಳವಳ್ಳಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ಬಾಲಕಿ ನಿವಾಸಕ್ಕೆ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಭೇಟಿ.. ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ಜಮೀರ್ ..

Leave a Reply