ಬಿಜೆಪಿಗೆ ಪಾಕಿಸ್ತಾನ ಶತ್ರು ರಾಷ್ಟ್ರ ಇರಬಹುದು, ಆದರೆ ಕಾಂಗ್ರೆಸ್‌ಗೆ  ಅಲ್ಲ : ಬಿಕೆ ಹರಿಪ್ರಸಾದ್ – Vishwanews24

Featured, ರಾಜ್ಯ ನ್ಯೂಸ್

ಬಿಜೆಪಿಗೆ ಪಾಕಿಸ್ತಾನ ಶತ್ರು ರಾಷ್ಟ್ರ ಇರಬಹುದು, ಆದರೆ ಕಾಂಗ್ರೆಸ್‌ಗೆ  ಅಲ್ಲ : ಬಿಕೆ ಹರಿಪ್ರಸಾದ್ 

ಬೆಂಗಳೂರು: ಬಿಜೆಪಿಗೆ ಪಾಕಿಸ್ತಾನವು “ಶತ್ರು ದೇಶ” ಆಗಿರಬಹುದು, ಆದರೆ ಕಾಂಗ್ರೆಸ್ ಅದನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ರಾಜ್ಯ ವಿಧಾನಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಕಪಾಲದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲಿನ ಚರ್ಚೆಯ ವೇಳೆ ಮಾತನಾಡಿರುವ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರತೀಯ ಸೇನಾ ಪರೀಕ್ಷೆಯಲ್ಲಿ ಫೇಲ್ : ಮನನೊಂದು ಯುವಕ ನೇಣಿಗೆ ಶರಣು – Vishwanews24

ಪರಿಷತ್ತಿನಲ್ಲಿ ನಡೆದ ಚರ್ಚೆಯ ವೇಳೆ ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶತ್ರು ದೇಶ ಎಂದರೆ ನಿಮ್ಮ (ಬಿಜೆಪಿ) ಪ್ರಕಾರ ಅದು ಪಾಕಿಸ್ತಾನ. ಆದರೆ, ನಮಗೆ ಅದು ಶತ್ರು ದೇಶವಲ್ಲ, ನೆರೆಯ ದೇಶ ಮಾತ್ರ. ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್‌ಕೆ ಆಡ್ವಾಣಿಗೆ ಭಾರತ ರತ್ನ ನೀಡಿ ಗೌರವಿಸಿತು. ಆದರೆ, ಅವರು ಪಾಕಿಸ್ತಾನದ ಲಾಹೋರ್‌ನಲ್ಲಿರುವ ಜಿಲ್ಲಾ ಸಮಾಧಿಗೆ ಭೇಟಿ ನೀಡಿ, ಅವರಷ್ಟು ಜಾತ್ಯಾತೀತ ನಾಯಕ ಯಾರೂ ಇಲ್ಲ ಎಂದಿದ್ದರು. ಆಗ ಬಿಜೆಪಿಗರಿಗೆ ಪಾಕಿಸ್ತಾನ ಶತ್ರು ದೇಶವಾಗಿರಲಿಲ್ಲವೇ?…ಕಾಂಗ್ರೆಸ್ ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ ನಂತರವೂ ಪಾಕಿಸ್ತಾನವನ್ನು “ಶತ್ರು ರಾಷ್ಟ್ರ” ಎಂದು ಕಾಂಗ್ರೆಸ್‌ ಕರೆಯೋದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ಸುದ್ದಿ: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ – Vishwanews24

 

Leave a Reply