ಬಿಜೆಪಿಯ ರಕ್ತದಾಹವನ್ನು ಕಾಂಗ್ರೇಸ್ ನವರು ಹುಟ್ಟಡಗಿಸುತ್ತೇವೆ : ವೀರಪ್ಪ ಮೊಯಿಲಿ – Vishwnaews24

Featured, ರಾಜ್ಯ ನ್ಯೂಸ್

ಬಿಜೆಪಿಯ ರಕ್ತದಾಹವನ್ನು ಕಾಂಗ್ರೇಸ್ ನವರು ಹುಟ್ಟಡಗಿಸುತ್ತೇವೆ : ವೀರಪ್ಪ ಮೊಯಿಲಿ – Vishwnaews24

ಚಿಕ್ಕಬಳ್ಳಾಪುರ: ಬಿಜೆಪಿಯವರು ರಕ್ತ ಬೀಜಾಸುರರು, ಬಿಜೆಪಿಯವರಿಗೆ ರಕ್ತ ದಾಹ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಮೊಯಿಲಿ, ಬಿಜೆಪಿಯ ರಕ್ತದಾಹವನ್ನು ಕಾಂಗ್ರೇಸ್ ನವರು ಹುಟ್ಟಡಗಿಸುತ್ತೇವೆ ಎಂದು ಹೇಳಿದ್ದಾರೆ. ‌

ಇದೇ ವೇಳೆ, ಪ್ರತಿದಿನ ಕೋಮು ಸಂಘರ್ಷಕ್ಕೆ ಬಿಜೆಪಿಯವರು ನಾಂದಿ ಹಾಡುತ್ತಿದ್ದಾರೆ ಎಂದಿರುವ ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ದ ಕೂಡಾ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ತಾವು ಎಂಥಾ ದುಷ್ಟ ಮುಖ್ಯಮಂತ್ರಿ ಅಂಥ ತಾವೇ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ ಎಂದಿರುವ ಮೊಯ್ಲಿ, ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಕುಮಾರಸ್ವಾಮಿಯೇ ಒಳಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ‌

ಅಲ್ಲದೇ ಕುಮಾರಸ್ವಾಮಿ ತಾವೇ ಮೀರ್ ಸಾಧೀಕ್ ಅಂತ ಹೆಗಲು ಮುಟ್ಟಿಕೊಂಡು ನೋಡಿದ್ದಾರೆ ಎಂದು ಹೇಳಿರುವ ಮಾಜಿ‌ ಸಿಎಂ ಮೊಯ್ಲಿ, ಪ್ರಧಾನಿ ಮೋದಿ ಆಡಳಿತ ದುರಂತದ ಕಾಲ ಅಂತ ಮುಂದೊಂದು ದಿನ ಇತಿಹಾಸ ಕಾರರು ಬರೆಯುತ್ತಾರೆ‌ ಎಂದು ವ್ಯಂಗ್ಯವಾಡಿದ್ದಾರೆ.

RSS​ ಸಾಧನೆ ಬಗ್ಗೆ ಚರ್ಚಿಸೋಣ ಎಂದು ಉತ್ಸುಕರಾಗಿರುವ ಕಾಂಗ್ರೆಸ್​​ನವರೇ ವೇದಿಕೆಯನ್ನು ರೂಪಿಸಲಿ, ಅಲ್ಲೇ ಚರ್ಚೆ ಮಾಡೋಣ : ಉಗ್ರಪ್ಪಗೆ ಸಿ.ಟಿ.ರವಿ

Leave a Reply