ಬಿಜೆಪಿಯಲ್ಲಿ  ಯಾವುದೇ ಗೊಂದಲವಿಲ್ಲ. ಕಾರ್ಯಕರ್ತರು ನಾವೆಲ್ಲ ಒಟ್ಟಿಗಿದ್ದೇವೆ : ಅರುಣ್ ಸಿಂಗ್ -Vishwanews24

Featured, ರಾಜ್ಯ ನ್ಯೂಸ್

ಬಿಜೆಪಿಯಲ್ಲಿ  ಯಾವುದೇ ಗೊಂದಲವಿಲ್ಲ. ಕಾರ್ಯಕರ್ತರು ನಾವೆಲ್ಲ ಒಟ್ಟಿಗಿದ್ದೇವೆ : ಅರುಣ್ ಸಿಂಗ್ -Vishwanews24

ಬೆಂಗಳೂರು: ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಕಾರ್ಯಕರ್ತರು ನಾವೆಲ್ಲ ಒಟ್ಟಿಗಿದ್ದೇವೆ. ಒಟ್ಟಾಗಿ ಸರ್ಕಾರವನ್ನು ‌ಮುನ್ನಡೆಸುತ್ತೇವೆ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿಎಂ ಬದಲಾವಣೆ ವಿಚಾರ ಇಲ್ಲ. ಕಾಂಗ್ರೆಸ್​ ಸುಮ್ಮನೆ ಆರೋಪ ಮಾಡುತ್ತಿದೆ. ಜೆಡಿಎಸ್ ಕ್ವಾರಂಟೀನ್​ನಲ್ಲಿದೆ. ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ” ಎಂದರು.

ಮೂರು ದಿನ ಪಕ್ಷದ ಕಾರ್ಯಕ್ರಮ ಇದೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತೇವೆ. ಪಕ್ಷದ ಹಲವು ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.