ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು : ಡಿಕೆ ಶಿ. -Vishwanews24
ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು : ಡಿಕೆ ಶಿ. -Vishwanews24
ಬೆಂಗಳೂರು: ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ ಎಂಬ ವಿಶ್ವನಾಥ್ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದರು. ಇದು ಬಿಜೆಪಿ ಪಾರ್ಟಿ ವಿಚಾರ. ನಮಗೂ ಈ ಪಾರ್ಟಿ ವಿಚಾರಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ಬಿಎಸ್ ವೈ ನಾದ್ರೂ ಇಟ್ಕೊಳ್ಳಲಿ, ವಿಶ್ವನಾಥ್ ರನ್ನಾದ್ರೂ ಮಾಡಲಿ, ಈಶ್ವರಪ್ಪನವರಾನ್ನಾದ್ರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು ಅಷ್ಟೆ ಎಂದರು.
ಕೇಂದ್ರ ಸರ್ಕಾರ ಕೊರೊನಾದಿಂದ ಸತ್ತವರಿಗೆ ಪರಿಹಾರ ಕೊಡುವ ವಿಚಾರ ಮಾಡ್ತಿಲ್ಲ. ರಾಜ್ಯದಲ್ಲಿ ಅನೌನ್ಸ್ ಮಾಡಿದವರಿಗೆ ಪರಿಹಾರ ಸರಿಯಾಗಿ ತಲುಪಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಟ್ಯಾಕ್ಸ್ ಮನ್ನಾ ಮಾಡಿದ್ದಾರೆ. ಇಲ್ಲಿ ಜನರಿಗೆ ಅನುಕೂಲವಾಗೋ ಯಾವ ಕೆಲಸನೂ ಮಾಡಿಲ್ಲ. ಚೆಕ್ ನಮಗೆ ಕೊಡಿ ಒಂದು ರೂಪಾಯಿನೂ ನಾವು ವೇಸ್ಟ್ ಮಾಡಲ್ಲ ಎಂದು ತಿಳಿಸಿದರು.
ಆಕ್ಸಿಜನ್ ಐಸಿಯು ಇಲ್ಲದೇ ಜನ ಸತ್ತಿದ್ದಾರೆ. ಇದು ಉತ್ತಮ ಕೊರೊನಾ ನಿರ್ವಹಣೆಯೇ..? ಎಲ್ಲದಕ್ಕೂ ಕೋರ್ಟ್ ಮಧ್ಯಪ್ರವೇಶಿಸಿ ನಿಮಗೆ ತರಾಟೆಗೆ ತೆಗೆದುಕೊಂಡಿರೋದು ಎಂದು ಡಿಕೆಶಿ ಅವರು ಅರುಣ್ ಸಿಂಗ್ ವಿರುದ್ಧ ವಾಗ್ಧಾಳಿ ನಡೆಸಿದರು.
