ಬಿರುಗಾಳಿಗೆ ಹಾರಿಹೋದ ಜಾನಪದ ಕಲಾವಿದ ಮಂಚಿಕೆರೆ ಸಾಧು ಪಾಣಾರ ಮನೆಯ ಮೇಲ್ಛಾವಣಿ ನೆರವಿಗೆ ನಿಂತ ಭಾಸ್ಕರ್ ಪೂಜಾರಿ ಗುಂಡಿಬೈಲ್-vishwanews24
ಬಿರುಗಾಳಿಗೆ ಹಾರಿಹೋದ ಜಾನಪದ ಕಲಾವಿದ ಮಂಚಿಕೆರೆ ಸಾಧು ಪಾಣಾರ ಮನೆಯ ಮೇಲ್ಛಾವಣಿ ನೆರವಿಗೆ ನಿಂತ ಭಾಸ್ಕರ್ ಪೂಜಾರಿ ಗುಂಡಿಬೈಲ್
ಉಡುಪಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಂಚಿಕೆರೆ ಜಾನಪದ ಕಲಾವಿದ ಶ್ರೀ ಸಾಧು ಪಾಣಾರರವರ ಮನೆಯು ಮೇ 03ರ ಸಂಜೆ ಬೀಸಿದ ಭೀಕರ ಬಿರುಗಾಳಿಗೆ ಇಡೀ ಮನೆಯ ಮೇಲ್ಛಾವಣಿ ಹಾರಿಹೋಗಿ ಅಪಾರ ನಷ್ಟ ಉಂಟಾಗಿದ್ದು ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಶ್ರೀ ಕ್ಷೇತ್ರ ಮೂಡುಸಗ್ರಿಯ ಧರ್ಮದರ್ಶಿ ಶ್ರೀ ಭಾಸ್ಕರ್ ಪೂಜಾರಿ ಗುಂಡಿಬೈಲು ಅವರ ಮನೆಗೆ ಭೇಟಿ ಕೊಟ್ಟು ಭಕ್ತರ ಪರವಾಗಿ ಧನ ಸಹಾಯವನ್ನು ನೀಡಿ ಸಹಕಾರ ಮಾಡಿದರು.
ಈ ಸಂಧರ್ಭದಲ್ಲಿ ಶ್ರೀ ಜಿ. ಶ್ರೀನಿವಾಸ್ ಪೂಜಾರಿ, ವಿಶು ಕುಮಾರ್, ಚೆನ್ನಕೇಶವ ಇದ್ದರು.
ವರದಿ: ಪುರುಷೋತ್ತಮ ಸಾಲಿಯಾನ್
ವಿಶ್ವನ್ಯೂಸ್24: 9343846360

