ಬಿಸಿ ಪಾಟೀಲ್ ಅವರಿಗೆ ಮನೆಯಲ್ಲಿಯೇ ಕೊರೊನಾ ಲಸಿಕೆಗೆ ನೀಡಿದ ಆರೋಗ್ಯಾಧಿಕಾರಿ ಅಮಾನತು -Vishwanews24
ಬಿಸಿ ಪಾಟೀಲ್ ಅವರಿಗೆ ಮನೆಯಲ್ಲಿಯೇ ಕೊರೊನಾ ಲಸಿಕೆಗೆ ನೀಡಿದ ಆರೋಗ್ಯಾಧಿಕಾರಿ ಅಮಾನತು -Vishwanews24
ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನೆಯಲ್ಲಿಯೇ ಕೊರೊನಾ ಲಸಿಕೆಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲ್ಲೂಕು ವೈದ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಟಿಎಚ್ಒ ಡಾ.ಝಡ್.ಆರ್.ಮಕಾಂದಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 2 ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಯಲ್ಲಿಯೇ ದಂಪತಿಗೆ ವಾಕ್ಸಿನ್ ನೀಡಿದ್ದು ದೊಡ್ಡಮಟ್ಟದ ವಿವಾದವಾಗಿತ್ತು. ಅಲ್ಲದೆ ಮನೆಯಲ್ಲಿಯೇ ಲಸಿಕೆ ನೀಡಿದ್ದಕ್ಕೆ ಹಾವೇರಿಯ ಡಿಎಚ್ಓ ಕಾರಣ ಕೇಳಿ ನೋಟಿಸ್ ನೀಡಿದ್ದರು. ಈಗ ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ.ತ್ರೀಲೋಕಚಂದ್ರ ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ಉಡುಪಿ: ಅನಧಿಕೃತ ಮೀನುಗಾರಿಕೆ ನಡೆಸದಂತೆ ಎಚ್ಚರ ವಹಿಸಿ : ಕ್ಯಾಪ್ಟನ್ ಮಣಿವಣ್ಣನ್ ಪಿ -Vishwanews24
ಕೊರೊನಾ ಲಸಿಕೆ ಹಂಚಿಕೆ ಮಾರ್ಗಸೂಚಿಗಳ ಪ್ರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲೇ ಲಸಿಕೆಯನ್ನು ನೀಡಬೇಕು. ಆದರೆ ಇಲ್ಲಿ ನಿಯಮ ಉಲ್ಲಂಘನೆ ಆಗಿತ್ತು. ಮಕಾಂದಾರ ಸೂಚನೆಯಂತೆ ಕಿಟ್ ಹೊರಗೆ ತಂದು ಸಚಿವರ ಮನೆಗೆ ತೆರಳಿ ತಾಲೂಕಾಸ್ಪತ್ರೆಯ ಸಿಬ್ಬಂದಿ ಲಸಿಕೆ ಹಾಕಿದ್ದರು.
