ಬೆಂಗಳೂರಿನ ಭಕ್ತರಿಂದ ಧರ್ಮಸ್ಥಳಕ್ಕೆ ಕುಡಿಯುವ ನೀರಿನ ಕೊಡುಗೆ -Vishwanews24
ಉಜಿರೆ: ಧರ್ಮಸ್ಥಳದಲ್ಲಿ ನೀರಿನ ಕೊರತೆಯನ್ನು ಗಮನಿಸಿದ ಬೆಂಗಳೂರಿನ ಬಸವನಗುಡಿ ಸುಂಕೇನಹಳ್ಳಿಯ ಭಕ್ತರು ಸೋಮವಾರ ರಾತ್ರಿ ಇಲ್ಲಿಗೆ ಬಂದು 6,780 ಲೀಟರ್ ಕುಡಿಯುವ ನೀರನ್ನು ಕೊಡುಗೆಯಾಗಿ ನೀಡಿದರು.
339 ಕ್ಯಾನ್‌ಗಳಲ್ಲಿ ತಲಾ 20 ಲೀಟರ್‌ಗಳಂತೆ ಒಟ್ಟು 6,780 ಲೀಟರ್ ನೀರನ್ನು ತಮ್ಮ ವಾಹನಗಳಲ್ಲಿ ಸೋಮವಾರ ರಾತ್ರಿ ತಂದು ಕೊಟ್ಟರು.
‘ಅನ್ನಪೂರ್ಣ ಛತ್ರದಲ್ಲಿ ಅಕ್ಕಿ ಬೇಯಿಸಲು ಹಾಗೂ ಭಕ್ತರಿಗೆ ಕುಡಿಯಲು ಈ ನೀರನ್ನು ಬಳಸಲಾಗಿದೆ’ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
