ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ – Vishwanews24
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ – Vishwanews24
ಮಂಗಳೂರು, : ಓದಿನಲ್ಲಿ ಆಸಕ್ತಿ ಇಲ್ಲ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಇರುವುದಾಗಿ ಪತ್ರ ಬರೆದು ಬೆಂಗಳೂರಿನಿಂದ ಮನೆ ಬಿಟ್ಟಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಓದಿನಲ್ಲಿ ಆಸಕ್ತಿ ಇಲ್ಲವೆಂದು ನಾಪತ್ತೆಯಾಗಿದ್ದ ಏಳು ಮಕ್ಕಳ ಪೈಕಿ ಮೂವರು ಮೈಸೂರಿನಲ್ಲಿ ಪತ್ತೆಯಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ನಾಲ್ವರು ಮಕ್ಕಳು ನಾಪತ್ತೆಯಾಗಿ ಮಂಗಳೂರಿನ ಕೆಎಂಸಿ ಜ್ಯೋತಿ ಸಮೀಪ ಪತ್ತೆಯಾಗಿದ್ದಾರೆ.
ನಾಲ್ವರು ಮಕ್ಕಳು ಸದ್ಯ ಮಂಗಳೂರು ದಕ್ಷಿಣ(ಪಾಂಡೇಶ್ವರ) ಪೊಲೀಸ್ ಠಾಣೆಯ ಪೊಲೀಸರ ವಶದಲ್ಲಿದ್ದು, ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅ.14ರಿಂದ ನ.14ವರೆಗೆ ‘ಯಕ್ಷ ಮೋಹಿನಿ’ ಕೋಳ್ಯೂರು ರಾಮಚಂದ್ರ ರಾಯರಿಗೆ 90ರ ಸಂಭ್ರಮ – Vishwanews24
