ಬೆಂಗಳೂರು : ಅಪರಿಚಿತರಿಗೆ ಮೊಬೈಲ್ ಕೊಡೋ ಮುನ್ನ ಎಚ್ಚರ..! ಕರೆ ಮಾಡುವುದಾಗಿ ಮೊಬೈಲ್ ಪಡೆದು ಎಸ್ಕೇಪ್​ – Vishwanews24

Featured, ರಾಜ್ಯ ನ್ಯೂಸ್

ಕರೆ ಮಾಡುವುದಾಗಿ ಮೊಬೈಲ್ ಪಡೆದು ಎಸ್ಕೇಪ್​ ..

 ಮೊಬೈಲ್​ನಲ್ಲಿದ್ದ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್​ಮೇಲ್ : ಆರೋಪಿ ಬಂಧನ

ಬೆಂಗಳೂರು: ಸಿಲಿಕಾನ್‌ ಸಿಟಿ ಜನರೇ ಎಚ್ಚರ..ಪರಿಚಿತರಿಗೆ ಮೊಬೈಲ್ ಕೊಡೋ ಮುನ್ನ ಸ್ವಲ್ಪ ಯಾಮಾರಿದ್ರೂ ನಿಮ್ಮ ಖಾತೆ ಕನ್ನ ಹಾಕಿ ಹಣ ಪೀಕುವ ಜನರು ಹೆಚ್ಚಾಗಿದ್ದಾರೆ.

ನಿಮ್ಮ ಮೊಬೈಲ್‌ನನ್ನು ಅಪ್ಪಿತಪ್ಪಿಯೂ ಯಾರು ಕೇಳಿದ್ರು ಕೊಡುವುದಕ್ಕೆ ಮುಂದಾಗಬೇಡಿ, ಯಾಕೆಂದ್ರೆ ಇಂತದ್ದೇ ಒಂದು ಬೆಂಗಳೂರಿನ ಯಶವಂತಪುರದ ಮತ್ತಿಕೆರೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.

ಅಪರಿಚಿತ ವ್ಯಕ್ತಿಯೊಬ್ಬ, ನನ್ನ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಅರ್ಜೆಂಟ್ ಕಾಲ್ ಮಾಡಬೇಕು ಎಂದುಕೊಂಡು ದೇವವ್ರಾತ್ ಸಿಂಗ್ ಎಂಬವರ ಕೈನಿಂದ ಮೊಬೈಲ್‌ ತೆಗೆದುಕೊಂಡ ಕ್ಷಣ ಮಾತ್ರದಲ್ಲಿ ಬೇರೆ ಕೈನಲ್ಲಿ ಹತ್ತಿ ಓಡಿ ಹೋಗಿದ್ದಾನೆ. ಆ ಮೊಬೈಲ್‌ನಲ್ಲಿ ದೇವವ್ರಾತ್ ಸಿಂಗ್ ಮತ್ತು ಅವರ ಪ್ರೀಯತಮೆಯ ಫೋಟೋಗಳು ಇದ್ದವು. ಅದೇ ವಿಚಾರವನ್ನು ಇಟ್ಟುಕೊಂಡು ಹಣ ಕೊಡಿ ಇಲ್ಲವಾದ್ರೆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ದಾನೆ.

BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ : ಸರ್ಕಾರ ಆದೇಶ – Vishwanews24

ಲಕ್ಷ ಲಕ್ಷ ಹಣ ಕೇಳೋದಕ್ಕೆ ಶುರು ಮಾಡಿದ್ದನು ನಂತ್ರ ಆತ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ರು. ಬಳಿಕ ವಿಚಾರಣೆ ನಡೆಸಿ ಪವನ್, ಸೈಯದ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply