ಬೆಂಗಳೂರು :ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ; ಎಂಟು ವಿದೇಶಿಗರು ಸಿಸಿಬಿ ಪೊಲೀಸರ ವಶಕ್ಕೆ – Vishwanews24
ಬೆಂಗಳೂರು : ಮನೆ ಮಾಲೀಕರೆ ಎಚ್ಚರ ! ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ಆರೋಪ ; ಎಂಟು ವಿದೇಶಿಗರು ಸಿಸಿಬಿ ಪೊಲೀಸರ ವಶಕ್ಕೆ
ಬೆಂಗಳೂರು: ಬೆಂಗಳೂರು ಮನೆ ಮಾಲೀಕರೆ ಎಚ್ಚರವಾಗಿರಬೇಕು. ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆರೋಪ ಹಿನ್ನೆಲೆಯಲ್ಲಿ ಎಂಟು ವಿದೇಶಿಗರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಂಗೇರಿ ಹಾಗೂ ಸೋಲದೇವನಹಳ್ಳಿಯ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಹಾಗೂ ಆರು ಜನ ಪುರುಷರನ್ನು ವಶಕ್ಕೆ ಪಡೆಯಲಾಗಿದೆ.
ಕಾಶ್ಮೀರದಿಂದ ಶಬರಿಮಲೆಗೆ ಪಾದಯಾತ್ರೆ : ಮಂಗಳೂರಿನಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಸ್ವಾಗತ – Vishwanews24
ಆರೋಪಿಗಳು ಪ್ರಾಥಮಿಕವಾಗಿ ವಿಚಾರಣೆ ವೇಳೆ ತಾವು ಭಾರತ ನಿವಾಸಿಗಳು ಎಂದಿದ್ದಾರೆ.ಪಶ್ಚಿಮ ಬಂಗಾಳ ಮತ್ತು ತ್ರಿಪುರದ ಆಧಾರ್ ಕಾರ್ಡ್ಸ್, ಬಾಂಗ್ಲಾದೇಶದ ಕೋವಿಡ್ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಮತ್ತು ಕೆಲ ದಾಖಲೆಗಳು ದೊರೆತಿವೆ. ಆರೋಪಿಗಳು ಅಕ್ರಮ ವಲಸೆ ಬಂದವರು ಎಂಬ ಅನುಮಾನವಿದ್ದು, ತನಿಖೆ ಮಾಡಲಾಗ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
