ಬೆಂಗಳೂರು: ಸುರತ್ಕಲ್ ಟೋಲ್ ಗೇಟನ್ನು ಆದಷ್ಠು ಶೀಘ್ರ ರದ್ದುಗೊಳಿಸಿ : ಸದನದಲ್ಲಿ ಖಾದರ್ ಆಗ್ರಹ – VIshwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಸುರತ್ಕಲ್ ಟೋಲ್ ಗೇಟನ್ನು ಆದಷ್ಠು ಶೀಘ್ರ ರದ್ದುಗೊಳಿಸಿ : ಸದನದಲ್ಲಿ ಖಾದರ್ ಆಗ್ರಹ – VIshwanews24

ಬೆಂಗಳೂರು: ಸುರತ್ಕಲ್ ಟೋಲ್ ಗೇಟ್ ಬಗ್ಗೆ ಸದನದಲ್ಲಿ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್ ವಿಷಯ ಪ್ರಸ್ತಾಪಿಸಿದ್ದಾರೆ.

ಸದನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಯು.ಟಿ. ಖಾದರ್, ಈಗಾಗಲೇ 60 ಕಿ.ಮೀ. ಒಳಗೆ ಎರಡೆರಡು ಟೋಲ್ ಗೇಟ್ ಇದ್ದಲ್ಲಿ ಅವುಗಳನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಕೇಂದ್ರ ಸರಕಾರ ಬಂದಿದೆ. ಈ ನಡುವೆ ಸುರತ್ಕಲ್ ಹೆಜಮಾಡಿ, ಬ್ರಹ್ಮರಕೂಟ್ಲು ಹಾಗೂ ತಲಪಾಡಿ ಟೋಲ್ ಗೇಟ್ ಗಳಿದೆ. ಇವುಗಳಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಟೋಲ್ ಗೇಟನ್ನು ಆದಷ್ಠು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಜನರ ಸಮಸ್ಯೆಗೆ ಸರಕಾರ ತಕ್ಷಣ ಸ್ಪಂದಿಸಬೇಕು. ಕೇಂದ್ರ ಸರಕಾರದ ಆದೇಶ ಆದಷ್ಟು ಶೀಘ್ರ ಜಾರಿಯಾಗಲಿ. ಆ ಮೂಲಕ ಜನರಿಗೆ ಆಗುತ್ತಿರುವ ಸಮಸ್ಯೆಗೆ ಮುಕ್ತಿ ನೀಡಿ ಎಂದು ಸದನದಲ್ಲಿ ವಿಪಕ್ಷ ಉಪನಾಯಕ ಖಾದರ್ ಆಗ್ರಹಿಸಿದ್ದಾರೆ.

28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ : ಹಿಜಾಬ್‌ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಅವಕಾಶ ಇಲ್ಲ  : ಸಚಿವ ನಾಗೇಶ್‌ – Vishwanews24

Leave a Reply