ಬೆಂಗಳೂರು : ಹಿಂದೂಗಳ ರಕ್ಷಣೆಗೆ ಹಿಂದೂಸ್ಥಾನ ಜನತಾ ಪಾರ್ಟಿ – ಬಲಗೊಳಿಸಲು ಸಿದ್ಧತೆ – Vishwanews24
ಬೆಂಗಳೂರು : ಹಿಂದೂಗಳ ರಕ್ಷಣೆಗೆ ಹಿಂದೂಸ್ಥಾನ ಜನತಾ ಪಾರ್ಟಿ – ಬಲಗೊಳಿಸಲು ಸಿದ್ಧತೆ
ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಅನಂತರ ಹಿಂದೂಪರರು ಬಿಜೆಪಿ ವಿರುದ್ಧ ಅಸಮಾಧಾನ ಗೊಂಡಿದ್ದು, ಈಗಾಗಲೇ ಸ್ಥಾಪನೆ ಯಾಗಿರುವ ಹಿಂದೂಸ್ಥಾನ ಜನತಾ ಪಾರ್ಟಿಯನ್ನು ಬಲಗೊಳಿಸಲು ಮುಂದಾಗಿದ್ದಾರೆ.
ವಿನಾಯಕ ಎನ್ನುವವರಿಂದ 2014ರಲ್ಲೇ ರಾಷ್ಟ್ರೀಯ ಪಕ್ಷವಾಗಿ ನೋಂದಣಿಯಾಗಿರುವ ಈ ಪಾರ್ಟಿ ರಾಜ್ಯದಲ್ಲಿ ಸಕ್ರಿಯವಾಗಿಲ್ಲ.
ಆದರೆ, ಇತ್ತೀಚೆಗೆ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಯಾದ ಅನಂತರ ಬಿಜೆಪಿ ಅಧಿಕಾರದಲ್ಲಿದ್ದರೂ, ಹಿಂದೂ ಗಳ ರಕ್ಷಣೆ ಮಾಡದಿರುವ ಬಗ್ಗೆ ಹಿಂದೂ ಸಂಘಟನೆಗಳು ಅಸಮಾಧಾನ ಹೊರ ಹಾಕಿದ್ದರು.
ಆಗಸ್ಟ್ 7 ರಂದು ಹಿಂದೂಸ್ಥಾನ ಜನತಾ ಪಾರ್ಟಿ ಬೆಂಗಳೂರಿನಲ್ಲಿ ಸಭೆ ಸೇರಿ ನೂತನ ಪದಾಧಿಕಾರಿಗಳ ಆಯ್ಕೆಗೆ ಮುಂದಾಗಿದೆ.
