ಬೆಳಗಾವಿ: ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ – vishwanews24

Featured, ರಾಜ್ಯ ನ್ಯೂಸ್

ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರಿಂದ ಕ್ರಿಮಿನಾಶಕ ಔಷಧಿ ಸಿಂಪಡಿಕೆ..

ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿ ವಿಷವಾಗಿ ಮಾರ್ಪಟ್ಟು ಇಡೀ ಕುಟುಂಬ ಅಸ್ವಸ್ಥ..

ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಅಣಬೆಗಳ ಬಗ್ಗೆ ಇರಲಿ ಎಚ್ಚರ..

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ವಿಷಪೂರಿತ ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.

ಉಮರಾಣಿ ಗ್ರಾಮದ ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ, ಅಲ್ಲಿ ಬೆಳೆದಿದ್ದ ಅಣಬೆಗಳನ್ನು ಕಿತ್ತು ತಂದಿದ್ದರು. ಅಣಬೆ ಕಂಡ ಖುಷಿಯಲ್ಲಿ ಮನೆಯಲ್ಲಿ ಅಡುಗೆ ಮಾಡಿ ಎಲ್ಲರೂ ಸವಿದಿದ್ದರು. ಆದರೆ, ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಎಲ್ಲರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಮನೆಯಲ್ಲೇ ನರಳಾಡತೊಡಗಿದ್ದಾರೆ.

ವರದಿಗಳ ಪ್ರಕಾರ, ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರು ಕ್ರಿಮಿನಾಶಕ ಔಷಧಿಯನ್ನು ಸಿಡಿಸಿದ್ದರು. ಔಷಧಿ ಹೊಡೆದ ವಿಷಯ ತಿಳಿಯದ ಕುಟುಂಬದ ಸದಸ್ಯರು ಆ ಅಣಬೆಯನ್ನು ಕಿತ್ತು ತಂದು ಸೇವಿಸಿದ್ದಾರೆ. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿದ ಪರಿಣಾಮ ಅದು ವಿಷವಾಗಿ ಮಾರ್ಪಟ್ಟು ಇಡೀ ಕುಟುಂಬ ಅಸ್ವಸ್ಥಗೊಳ್ಳಲು ಕಾರಣವಾಗಿದೆ.

ಉಡುಪಿ: ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣ ; ಆರೋಪಿ ಝೀನತ್ ವಿರುದ್ಧ ಮತ್ತೆರಡು ಹೊಸ ಪ್ರಕರಣ ದಾಖಲು – vishwanews24

ತೀವ್ರ ಅಸ್ವಸ್ಥಗೊಂಡ 9 ಜನರನ್ನು ತಕ್ಷಣವೇ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಒಬ್ಬರು ಗರ್ಭಿಣಿ ಮಹಿಳೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇರಲಿ ಎಚ್ಚರ
ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಅಣಬೆಗಳ ಬಗ್ಗೆ ಜಾಗ್ರತೆ ಇರಲಿ
ಹೊಲಗಳಲ್ಲಿ ಬೆಳೆಯುವ ಅಣಬೆಗಳ ಮೇಲೆ ಕ್ರಿಮಿನಾಶಕಗಳು ಬಿದ್ದಿರುವ ಸಾಧ್ಯತೆ ಹೆಚ್ಚಿರುತ್ತದೆ
ಕೆಲವು ಜಾತಿಯ ಅಣಬೆಗಳು ನೈಸರ್ಗಿಕವಾಗಿಯೇ ವಿಷಕಾರಿಯಾಗಿರುತ್ತವೆ. ಅವುಗಳನ್ನು ಗುರುತಿಸುವುದು ಕಷ್ಟ
ಅಣಬೆ ತರುವ ಮುನ್ನ ಅವು ಬೆಳೆದ ಜಾಗ ಮತ್ತು ಅವುಗಳ ವಿಧದ ಬಗ್ಗೆ ಖಚಿತ ಮಾಹಿತಿ ಇರಲಿ
ಅಪರಿಚಿತ ಅಣಬೆಗಳನ್ನು ತಿಂದು ಜೀವಕ್ಕೆ ಸಂಚಕಾರ ತಂದುಕೊಳ್ಳಬೇಡಿ

ಅಯೋಧ್ಯೆ ಪ್ರಕರಣದ ಹಿನ್ನೆಲೆ : ರಾಜ್ಯದ ಎಲ್ಲಾ ಮುಜುರಾಯಿ ದೇಗುಲಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ಸಿಎಂ ಆದೇಶ – vishwanews24

Leave a Reply